ಆರ್ಯರ ಆಗಮನದಿಂದ ಭಾರತದಲ್ಲಿ ಮನುಷ್ಯ ದರ್ಶನಮಾಯವಾಗಿ ವಕ್ರ ಆರ್ಥಿಕ ವ್ಯವಸ್ಥೆ ಗೆ ಅಡಿಗಲ್ಲಿರಿಸಿ ಮೇಲು, ಕೀಳು, ಬಡವ, ಬಲ್ಲಿದ ರೆಂಬ ತಾರತಮ್ಯದ ಅಸಮಾನ ಸಮಾಜವನ್ನು ಅನಾವರಣಗೊಳಿಸಿದ ಮತೀಯವಾದಿಗಳ ಕೃತ್ತಿಮತೆಯ ಇತಿಹಾಸ ಸೃಷ್ಟಿಯಾಗಿ ಮರ್ದಿತ ಅವರ್ಣಿಯ ಜನಾಂಗದ ಅಸಹ್ಯ ಯಾತನೆಗೆ ಕಾರಣೀಭೂತವಾಗಿ ಹಿಂಸೆ, ಶೋಷಣೆ, ಅಪಮಾನ, ಅಸಮಾನ, ಆತ್ಮ ಸಂಹಾರ, ಅಂಧಕಾರ, ಆಷಾಡತೆ, ಹಾಹಾಕಾರ, ಅವೈಜ್ಞಾನಿಕ, ಅಜ್ಞಾನ, ಭಯ ಮೌಲ್ಯಗಳಲ್ಲಿ ಜನರನ್ನು ಕೊಳೆ ಹಾಕುತ್ತ ನಾಡಿನ ಇತಿಹಾಸವನ್ನು ಹಿಡಿಯಾಗಿ ಭ್ರಷ್ಟ ಗೊಳಿಸಿ ಜಾತಿ, ಭಾಷೆ, ವರ್ಣ, ಧರ್ಮ, ವರ್ಗ, ವೈರುಧ್ಯಗಳಂತಹ ಸನ್ನಿ ಸಮಾಜವನ್ನು ಸೃಷ್ಟಿಸಲಾಯಿತು. ಇಂತಹ ರೋಗ ಗ್ರಸ್ಥ ಸಮಾಜವನ್ನು ಬುಡ ಮೇಲು ಮಾಡಿ ಮನುಷ್ಯ ದರ್ಶನದ ಮಾನವ ಧರ್ಮ ಪುನರುತ್ಥಾನಕ್ಕಾಗಿ ಮಾನವೀಯ ಹೋರಾಟಗಳು ನಾಡಿನಲ್ಲಿ ನಡೆದಿವೆ, ನಡೆಯುತ್ತಲೇ ಇವೆ.
ಸ್ಪೃಶ್ಯ – ಅಸ್ಪೃಶ್ಯ ರಿರದಂತಹ ಸಾಮಾಜಿಕ ವ್ಯವಸ್ಥೆ, ಧನಿಕರು – ತಿರುಕರಿರದ ಆರ್ಥಿಕ ವ್ಯವಸ್ಥೆ, ಮೋಸ, ಮೌಡ್ಯ, ಮತಾಂಧತೆಗಳಿಲ್ಲದ ಧಾರ್ಮಿಕ ವ್ಯವಸ್ಥೆ, ಶೋಷಣೆ, ಅಸಮಾನತೆ, ಸ್ವಜನ ಪಕ್ಷಪಾತ ವಂಶಪಾರಂಪಯ್ಯ ನಿರಂಕುಶಾಧಿಕಾರ ರಹಿತ ರಾಜಕೀಯ ವ್ಯವಸ್ಥೆ, ಉಳ್ಳವರು ಇಲ್ಲದವರೊಂದಿಗೆ ಹಂಚುಣ್ಣುವ ನೈತಿಕ ವ್ಯವಸ್ಥೆ, ಸಮಸ್ತ ಜನತೆಯನ್ನು ತನ್ನಂತೆ ಕಾಣುವ ಅಧ್ಯಾತ್ಮಿಕ ವ್ಯವಸ್ಥೆ, ವಿಶ್ವದ ಏಕತೆ ಸಮಾನತೆಯನ್ನು ಸಾರುವ ಮಾನವತಾ ವ್ಯವಸ್ಥೆಯ ಸ್ಥಾಪನೆಗಾಗಿ ಬುದ್ಧನಿಂದ ಭೀಮನವರೆವಿಗೂ ಆಲೋಚಿಸಿ ವಿರೋಚಿತ ಹೋರಾಟಗಳು ಜರುಗುತ್ತಲೇ ಬಂದಿವೆ.
ಆಗಾಗಿ ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪರಿಯಾರ್, ಕನಕ, ಕಬೀರ, ಸವಿತ, ಸೂಫಿ, ಸ್ವಾಮಿ ವಿವೇಕಾನಂದ, ನಾರಾಯಣಗುರು ಮುಂತಾದ ಮಾನವ ಪ್ರೇಮಿ ವಿಶ್ವ ಮಾನವರ ಆಶಯಗಳನ್ನು ಮುನ್ನಡೆಸಲು ಶೋಷಕ ವ್ಯವಸ್ಥೆಯನ್ನು ದ್ವಂಸಗೊಳಿಸಿ ಸಮತಾ ಸಮಾಜದ ನಿರ್ಮಾಣದತ್ತ ಹೆಜ್ಜೆ ಇಡುವತ್ತ, ಭೂಮಿ ಮೇಲಿನ ಭೂಮಾಲೀಕರ ಏಕ ಸ್ವಾಮ್ಯತೆ ಅಧಿಪತ್ಯವನ್ನು ಕೊನೆಗಾಣಿಸಲು ಕಂಕಣತೊಟ್ಟ ದಲಿತ ಪ್ರಜ್ಞಾವಂತರ ಸಂವೇದನೆಯಾಗಿ ಹೊರ ಹೊಮ್ಮಿದ ದಲಿತರ ಸುಂದರ ಸಂಸ್ಕೃತಿಯ ಬಂಡಾಯ ಸಾಹಿತ್ಯ ಅದರ ಉದಯೋನ್ಮುಖ ಚಳುವಳಿಯೇ ದಲಿತ ಚಳುವಳಿ, ದಲಿತರ ಒಕ್ಕೊರಲಿನ ಕೂಗೇ ದಲಿತ ಸಂಘರ್ಷ ಸಮಿತಿ ಆನೆಯನ್ನು ಮಣಿಸಿದ ಇರುವೆಗಳಂತೆ ಭೂ ಮಾಲೀಕ ಬಂಡವಾಳಿಗರಿಂದ ದಲಿತರ ಮೇಲಾಗುವ ಹಲ್ಲೆ, ಕೊಲೆ, ಅತ್ಯಾಚಾರ, ದೌರ್ಜನ್ಯಗಳನ್ನು ದ.ಸಂ.ಸ ಪ್ರತಿಭಟಿಸುತ್ತಾ ದಲಿತರ ಸಂಕಷ್ಟಕ್ಕೆ ಹೆಗಲಿತ್ತು ನೆರವಾಗುತ್ತ 26 ವಸಂತಗಳನ್ನು ಕ್ರಮಿಸಿದೆ.
ಸೈದ್ಧಾಂತಿಕ ಪ್ರಖರತೆಯ ಎಲ್ಲೆಯೊಳಗೆ ದಲಿತ ವಿಚಾರವಂತರ ಪರಸ್ಪರ ಹೃದಯ ಸಂವಾದಗಳೊಂದಿಗೆ ಹೆಣೆದು ನಿಂತಿರುವ ಜಿಗುಟು ವ್ಯವಸ್ಥೆಗೆ ಮಾನವತೆಯ ಪಾಠ ಕಲಿಸುವ ಅತ್ಯಂತ ಸಾಮಾಜಿಕ ಜವಾಬ್ದಾರಿಯನ್ನು ಹೆಗಲ ಮೇಲಿರಿಸಿ ನಡೆಯುತ್ತಿದ್ದ ದ.ಸಂ.ಸದಲ್ಲಿ ದಿವಂಗತ ಪ್ರೊ|| ದೇವಯ್ಯ ಹರವೆ, ದಿವಂಗತ ಪ್ರೊ. ಬಿ. ಕೃಷ್ಣಪ್ಪರವರಂತಹ ಅನೇಕ ಹಿರಿಯರ ಜೊತೆಯಲ್ಲಿ ಒಳಗೆ ಇರುವಂತೆ ಹೊರಗೂ ಕಾಣಿಸಿಕೊಂಡು ಅಂಬೇಡ್ಕರ್ ರವರ ಕಣ್ಣಿನ ಮೂಲಕ ಜಗತ್ತನ್ನು ನೋಡುತ್ತ ಹೋರಾಟದ ಹಾದಿ ತುಳಿದವರನೇಕರಲ್ಲಿ ನಾನು ಒಬ್ಬ.
ಗ್ರಾಮಾಂತರ ಪ್ರದೇಶದ ಹಳ್ಳಿಗಾಡಿನ ಸೊಗಡಿನ ದುಡಿಯುವ ಕೂಲಿ ಕುಟುಂಬದಿಂದ ಬಂದ ಶೋಷಕರ ದೌರ್ಜನ್ಯ ದರ್ಪಗಳನ್ನು ಕಂಡುಂಡ ನನ್ನ ಕುಟುಂಬ ಹಾಗೂ ನನ್ನ ಹಳ್ಳಿಯ ಮುಗ್ಧ ದಲಿತರು ಭೂ ಮಾಲೀಕರ ದೌರ್ಜನ್ಯದ ಹೊಡೆತಕ್ಕೆ ಸಿಕ್ಕಿ ಜರ್ಜಿತರಾಗಿ ಹೋದ ಕುಟುಂಬಗಳಿಗೆ ಡಾ|| ಆಂಬೇಡ್ಕರ್ ವಿಚಾರ ದಾರಿ ದೀವಿಗೆಯಾಯಿತು.
ಅದಾಗಿ ನನ್ನ ತಂದೆ ಓದು ಬರಹವಿಲ್ಲದಿದ್ದರು ಅವರು ವ್ಯವಹಾರಸ್ಥರು, ಮರದ ಸಣ್ಣ ವ್ಯಾಪಾರಸ್ಥರಾಗಿದ್ದರಿಂದ ಇವರಿಗೆ ಪಟ್ಟಣದ ಸಂಪರ್ಕವಿತ್ತು. ನಾನು ಅವರನ್ನು ಕೇಳುತ್ತಿದ್ದದ್ದು ಬಳಪ, ಪುಸ್ತಕ, ಪೆನ್ನು, ಇಂಕು, ಪೆನ್ಸಿಲ್‌ ಗಳನಷ್ಟೇ, ಸಿಹಿ ತಿಂಡಿಗಳನ್ನು, ನಾನು ಪುಸ್ತಕ ಕೇಳಿದಾಗಲೆಲ್ಲ ಅವರು ನನಗೆ ತಂದು ಕೊಡುತ್ತಿದ್ದ ಪ್ರಿಯವಾದ ಪುಸ್ತಕಗಳೆಂದರೆ ಡಾ| ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಬುದ್ದ, ಬಸವಣ್ಣ ರವರಂತಹ ಮನುಷ್ಯರ ಬದುಕನ್ನು ತಾರ್ಕಿಕವಾಗಿ ಅರ್ಥಮಾಡಿಕೊಳ್ಳುವಂತಹ ಪುಸ್ತಕಗಳನ್ನು ಪುಸ್ತಕ ಹಾಗೂ ಹಿರಿಯರ ಸಹವಾಸದಿಂದ ನನಗೆ ಬಾಲ್ಯ ಯೌವನಗಳ ವ್ಯತ್ಯಾಸಗಳ ಅರಿವು ಕಾಣದಾಯಿತು. ನನ್ನ ತಂದೆಗೆ ವ್ಯವಹಾರಿಕ ಜ್ಞಾನವಿದ್ದರೂ ತಾಯಿ ತಂದೆ ಗಳಿಬ್ಬರೂ ಅವಿದ್ಯಾವಂತರೇ ಕಿತ್ತು ತಿನ್ನುವ ಬಡತನ ನಮ್ಮ ಹಿರಿಯರು ಮಾಡಿದ ಸಾಲದ ನೆಪವೊಡ್ಡಿದ ಊರಿನ ಶ್ಯಾನುಬೋಗ ನರಸಿಂಹರಾವ್ ರವರು ಬಡ್ಡಿ ಚಕ್ರ ಬಡ್ಡಿ ಹಾಕಿ ಇದ್ದ 2 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿಕೊಂಡರೆ ವಾಸದ ಮನೆಯನ್ನು ಪಟೇಲ ಬೈಲೇಗೌಡರು ಬರೆಸಿಕೊಂಡು ಬೀದಿಗೆಸೆದರು. ನಾವು ನಮ್ಮ ವರ ಬರ್ಬರ ಬಡತನ, ಬದುಕು, ಬವಣೆ, ನನ್ನ ಎಳೆ ಮನಸ್ಸಿನ ಮೇಲೆ ಮಾಸದೆ ಮನೆಮಾಡಿ ನನ್ನಲ್ಲಿ ದುಃಖ, ದುಮ್ಮಾನ, ರೋಷ, ಆವೇಶ, ಹಲ್ಲು ಕಿತ್ತ ಎಡೆಬಿಚ್ಚಿ ಸರ್ಪದಾಗೆ ಬುಸುಗುಟ್ಟಿಸಿ ಸಹಸ್ರಾರು ವರ್ಷಗಳಿಂದ ನನ್ನಂತಹ ಪೂರ್ವ ಪೀಳಿಗೆಯನ್ನು ಅದುಮಿಟ್ಟ ವ್ಯವಸ್ಥೆಯ ಅಟ್ಟಹಾಸವನ್ನು ಮೆಟ್ಟಿ ನಿಲ್ಲುವ ದಿಟ್ಟ ನಿಲುವು ನನ್ನ ನೆತ್ತಿಗೇರಿ ನನ್ನ ಕುಟುಂಬದ ಜೀವನ ಸ್ಥಿತಿ ನನ್ನನ್ನು ಓದಿನೊಟ್ಟಿಗೆ ದಲಿತ ಚಳುವಳಿಗೆ ದುಮುಕುವಂತೆ ಪ್ರೇರೇಪಿಸಿತು. ನನ್ನ ಅಂತರಂಗದಲ್ಲಿ ಹೋರಾಟದ ಜ್ವಾಲಾಮುಖ, ಸಾಮಾಜಿಕ ಪಿಡುಗುಗಳ ಸಿಡಿದೇಳುವ ಬಂಡಾಯ ಪ್ರಜ್ಞೆಯ ವಿದ್ಯುತ್‌ ನನ್ನಲ್ಲಿ ಸಂಚರಿಸಿತ್ತು. ಹಣಕ್ಕಿಂತ ಅರಿವು ಸರಿಯೆನಿಸಿತು. ಬದುಕಿನಲ್ಲಿ ಹೇಗೆ ಬದುಕಿದ್ದೆ ಎಂಬುದು ಮುಖ್ಯವೆಂದೆನಿಸಿತು. ಒಟ್ಟಾರೆ ನನ್ನ ವರಿಗಾದ ಅನ್ಯಾಯವನ್ನು ತಡೆದು ಬೆಳಕಿನತ್ತ ಕೊಂಡೊಯ್ಯುವುದೇ ಜೀವನದ ಅದಮ್ಯ ಗುರಿಯೆಂದೆನಿಸಿ ದ.ಸಂ.ಸ ವನ್ನು ಶೋಷಿತರ ಮಧ್ಯೆ ಒಂದು ಅರಿತವಾದ ವೈಚಾರಿಕ ಅಸ್ತ್ರವನ್ನಾಗಿ ಬಳಸುತ್ತಾ ಬಂದೆವು.

ದ.ಸಂ.ಸ ಚಳುವಳಿಯಲ್ಲಿ ವಿದ್ಯಾರ್ಥಿಗಳು, ಪ್ರಗತಿ ಪರ ಸ್ವಾಮೀಜಿಗಳು, ಸರ್ಕಾರಿ ನೌಕರರು, ಕಾರ್ಖಾನೆಗಳ ಕಾರ್ಮಿಕರು, ಕೂಲಿ ಕಾರ್ಮಿಕರು, ಬುದ್ದಿ ಜೀವಿಗಳು, ವಿಚಾರವಂತರು ಪತ್ರಕರ್ತರು, ನ್ಯಾಯಾಧೀಶರು ನ್ಯಾಯಾವಾದಿಗಳು, ಮಹಿಳೆಯರು ಇನ್ನು ಹಲರು ಅನೇಕ ಸಮಾಜಿಕ ಕಳಕಳಿಯುಳ್ಳ ವಿವಿಧ ರಂಗದ ಹಿರಿಯರು, ಕಿರಿಯರು ಲಿಂಗ ಬೇಧವಿಲ್ಲದೆ ತೊಡಗಿಸಿಕೊಂಡರು ಅವರೆಲ್ಲರ ನೈತಿಕ ಬಲದಿಂದ ದ ಸಂ.ಸ ವನ್ನು ಕಠಿಣ ವಿರೋಧಗಳ ಮಧ್ಯೆ ದಲಿತರ ದೌರ್ಜನ್ಯಗಳ ವಿರುದ್ಧ ದಲಿತರ ಏಳಿಗೆಗಾಗಿ ಡಾ|| ಅಂಬೇಡ್ಕರ್ ತತ್ವ ಸಿದ್ಧಾಂತಗಳ ಅಡಿಯಲ್ಲಿ ಅರಿವಿನ ಅಣತೆಯನ್ನಾಗಿ ಪಚ್ಚಲಾಯಿತು. ಕಿಟಕಿ ಬಾಗಿಲುಗಳಿಲ್ಲದ ಜೋಪಡಿಯಲ್ಲಿ ಹಚ್ಚಿದ ದ.ಸಂ.ಸ ಅಣತೆಯು ಮಳೆ, ಬಿರುಗಾಳಿಗೆ ಸಿಲುಕದಂತೆ ನೋಡಿಕೊಳ್ಳುವ ಎಚ್ಚರ ಮುಂಚೂಣಿನಾಯಕರದಾಗಿತ್ತು ಅಂಬೇಡ್ಕರ್, ಲೋಹಿಯ, ಮಾರ್ಕ್ಸ್, ಮಾವೋ ಸಿದ್ಧಾಂತಗಳ ಸಂಗಮದ ದ.ಸಂ.ಸ ಕಾಲ ಕಳೆದಂತೆ ಮುಂಚೂಣಿ ಬುದ್ದಿ ಜೀವಿಗಳ ಮನದಲ್ಲಿ ಆಯಾ ಸಿದ್ಧಾಂತಗಳು ಬಲಿತು ದ.ಸಂ.ಸ ದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿ ಸಂಸತ್ ಪ್ರಜಾಪ್ರಭುತ್ವ ಒಪ್ಪು ನೆಪ್ಪುಗಳ ತರ್ಕಗಳು ದ.ಸಂ.ಸ ಏಕತೋದ್ದೇಶಕ್ಕಿದ್ದ ಚಲನೆಗೆ ತೊಡರುಗಾಲಾದವು
ಪ್ರೊ|| ಬಿ. ಕೃಷ್ಣಪ್ಪ, ಸಾಹಿತಿ ದೇವನೂರು ಮಹಾದೇವ ರವರು ಜೆ.ಪಿ. ಚಳವಳಿಯ ಹಿನ್ನೆಲೆಯವರಾದರೆ ದಲಿತ ಕವಿ ಡಾ| ಸಿದ್ದಲಿಂಗಯ್ಯ, ಇತರನೇಕರು ಮಾರ್ಕ್ಸ್ ವಾದಿಗಳಾಗಿದ್ದರು. ದಿನಾಂಕ: 3.9. 2001 ರಂದು ಡಾ|| ಸಿದ್ದಲಿಂಗಯ್ಯನವರು (ಅಗ್ನಿ ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿರುವುದನ್ನು ಗಮನಿಸಬಹುದು) ಅನೇಕ ದ.ಸಂ.ಸ ಮುಖ್ಯ ರಾಜ್ಯ ಸಮಿತಿ ಸಭೆಗಳಲ್ಲಿ ನಾನು ನೇರವಾಗಿ ಈ ಕುರಿತು ಚರ್ಚಿಸುತ್ತಿದ್ದೆನು. ದಲಿತ ಚಳುವಳಿಗೆ ಮಾರ್ಕ್ಸ್ವಾದ ನಿಶ್ಚಿತ, ಅಂಬೇಡ್ಕರ್ ವಾದ ಖಚಿತ ಅಂತು ಡಾ|| ಅಂಬೇಡ್ಕರ್ ತತ್ವ ಸಿದ್ಧಾಂತ ದಲಿತ ಚಳುವಳಿಗೆ ದಾರಿದೀಪವಾಗಲಿ. ಕಾಲಕ್ಕೆ ತಕ್ಕಂತೆ ಮಾರ್ಪಡಿಸಿ ಮುಂದೆ ಸಾಗೋಣವೆನ್ನುತ್ತಿದ್ದೆ.
1974 ರಲ್ಲಿ ದ.ಸಂ.ಸದ ಹೊಗೆ ಬಂಡಿಯು ಭದ್ರಾವತಿಯ ವಿಳಾಸ ಹೊತ್ತು ರಾಜ್ಯ ಪ್ರವೇಶಿಸಲು ಹೊರಟಾಗ ಪ್ರೊ|| ಬಿ.ಕೃಷ್ಣಪ್ಪ ನವರು ಚಾಲಕರಾಗಿದ್ದರು ಸಾಹಿತಿ ಪ್ರೋ ದೇವನೂರು ಮಹಾದೇವ, ಪ್ರೊ.ದೇವಯ್ಯ ಹರವೆ, ಡಾ|| ಸಿದ್ದಲಿಂಗಯ್ಯ, ಓ. ಶ್ರೀಧರನ್, ಓ.ರಾಜಣ್ಣ, ಡಿ.ಎಂ. ತಿಮ್ಮ ರಾಯಪ್ಪ ಹಾಗೂ ಹೋರಾಟದ ಮಹಾಪ್ರಬಂಧದ 6 ಮತ್ತು 7ನೇ ಪುಟಗಳಲ್ಲಿ ಪಟ್ಟಿ ಮಾಡಲಾಗಿರುವುದರಲ್ಲಿ ಕೆಲವಾರು ಹಿರಿಯರು ದ ಸಂ.ಸ ಉದಯೋನ್ಮುಖಕ್ಕೆ ಅಣಿಯಾಗಿ ಹೊರಟಿದ್ದ ಹೊಗೆ ಬಂಡಿಯ ಮೊದಲ ಸಾಲಿನ ಆಸನದಲ್ಲಿ ಅಸೀನರಾಗಿದ್ದು ಪ್ರಯಾಣಿಸುತ್ತದ್ದ ಪ್ರಯಾಣಿಕರಾಗಿದ್ದರೆ ನನ್ನಂತಹ ಕಿರಿಯ ವಿದ್ಯಾರ್ಥಿಗಳಲವರು ಅದೇ ಸಮಯದಲ್ಲಿ ಅದೇ ಬಂಡಿಯ ಕೊನೆ ಸಾಲಿನ ಆಸನದಲ್ಲಿ ಪ್ರಯಾಣಿಸಿ ಇಲ್ಲಿಗೆ 26 ವರ್ಷಗಳು ದ.ಸಂ.ಸ ಚಳುವಳಿಯಲ್ಲಿ ಕ್ರಮಿಸುವ ಹೊತ್ತಿಗೆ ಭದ್ರಾವತಿಯ ದ.ಸಂ.ಸ ವಿಳಾಸದ ಜೊತೆಗೆ ಹಲವು ವಿಳಾಸಗಳು ಸೇರಿ ದ.ಸಂ.ಸ ಕವಲಿಗೆ ಕಾರಣವಾಯಿತಾದರೂ, ದ.ಸಂ.ಸ ಹೋರಾಟದಲ್ಲಿ ತೀವ್ರತೆ ಕಾಣದೆ ಜೀವಂತವಾಗಿದೆ. ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ನಿಲ್ಲಿಸಲಾದ ದ.ಸಂ.ಸ ಯಾರೊಬ್ಬರ ಗುತ್ತಿಗೆಯಾಗಲಿ ಏಕ ವ್ಯಕ್ತಿಯ ಅಧಿಪತ್ಯಕ್ಕಾಗಲಿ ಮೀಸಲಾಗದೆ ಬಹು ಸಂಸ್ಥಾಪಕರ ಸದಸ್ಯತ್ವದಿಂದ ಒಂದು ಸಂಘಟನೆಯಾಗಿ ರೂಪಗೊಳ್ಳುವಂತಾಯಿತೆಂದು ಹೇಳಲೇ ಬೇಕಾಗಿದೆ.
ದ.ಸಂ.ಸ ಚಳುವಳಿಯ ಸೈದ್ಧಾಂತಿಕ ಬಿನ್ನಾಭಿಪ್ರಾಯಗಳಿಗೆ ಎಲ್ಲಾ ಮುಂಚೂಣಿ ನಾಯಕರು ಹೊಣೆಗಾರರಾಗುವುದು ಮಾನದಂಡ ಹಾಗೂ ಆತ್ಮ ರೋದನೆಯೇ ಸರಿ. ಅಂತು ದಲಿತ ಚಳುವಳಿ ಮುಂಚೂಣಿ ನಾಯಕರ ಮನ ಪರಿವರ್ತನೆಯಿಂದ ಡಾ॥ ಅಂಬೇಡ್ಕರ್ ಆಶಯಾ ಪರಿಪೂರ್ಣವಾಗುವುದರಲ್ಲಿ ಸಂದೇಹವಿಲ್ಲ. ಅಂತಹ ಸುಗ್ಗಿಯ ದಿನ ಹತ್ತಿರವಾದಲ್ಲಿ ನಾನು ಮೊದಲಿಗೆ ಎಂಬುವುದರಲ್ಲಿ ನಾನು ನನ್ನ ಸಂಶಯಿಸುವುದಿಲ್ಲ. ನಾನು ಹೋರಾಟಕ್ಕೆ ಕಾಲಿಟ್ಟ ಹಿನ್ನೆಲೆಯನ್ನು ಜ್ಞಾಪನ ಮಾಡಿದಲ್ಲಿ ನನಗಾಗಿ, ನಮಗಾಗಿ, ನಮ್ಮ ವರಿಗಾಗಿ ನಾನು ನನ್ನನ್ನು ಚಳುವಳಿಗೆ ಪ್ರೇರೇಪಿಸಿಕೊಂಡು ಚಳುವಳಿಗೆ ದುಮುಕ್ಕಿದ್ದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ.
ದಲಿತ ಚಳುವಳಿಯೆಂದರೆ ಯೊರೊಬ್ಬರದೂ ಅಲ್ಲ, ಯಾರ ವಿರುದ್ಧವೂ ಇಲ್ಲ. ಯಾರನ್ನು ಎದುರಿಸಲು ಸಹ ಅಲ್ಲ. ದಲಿತರಾದ ನಾವ ಮಾನಸಿಕವಾಗಿ ಸಿದ್ಧರಾಗಿ ರೋಗಗ್ರಸ್ತ ಸಮಾಜಕ್ಕೆ ಚಿಕಿತ್ಸೆ ಮಾಡುವ ಮಹತ್ತರ ಹೊಣೆ ಚಳುವಳಿಗಾರರ ಹೆಗಲ ಮೇಲಿನ ಜವಾಬ್ದಾರಿಯಾಗಿದೆ
ದ.ಸಂ.ಸ ಅನ್ಯಾಯದ ವಿರುದ್ಧ ಧ್ವನಿಯೆತ್ತಿದಾಗ ಭೂ ಮಾಲೀಕರು, ಬಂಡವಾಳಿಗರು, ಅಧಿಕಾರಿ ಶಾಹಿ ವರ್ಗ ಹಾಗೂ ರಾಜಕೀಯ ಬಲಿಷ್ಟರು, ದಸಂಸ ಚಳುವಳಿಗೆ ಅಪಾರ್ಥ ಕಲ್ಪಿಸಿ ಮುಂಚೂಣಿ ಮುಖಂಡರ ಮೂಗು ಮುರಿಯಲೆತ್ನಿಸಿದ ಮುಕುಟ ಮಣಿಗಳು ಚರಿತ್ರಾರ್ಹವಾ ಚಳುವಳಿಗಳ ಉದ್ದೇಶದ ಕಾರ್ಯಕ್ರಮಗಳನ್ನೂ ಅರ್ಥೈಸಿಕೊಳ್ಳಬೇಕು. ಆ ಮೂಲಕ ಶೋಷಕರು ಮನ ಪರಿವರ್ತನೆ ಮಾಡಿಕೊಂಡ ಮನುಷ್ಯರಿಗೆ ಬೆಲೆ ಸಂದಾಯವಾಗುತ್ತದೆ.
ದ ಸಂ.ಸ ಕ್ರಾಂತಿಗೀತೆಯಿಂದ ಹಳ್ಳಿ ಹಳ್ಳಿಗಳಲ್ಲಿ ದೌರ್ಜನ್ಯ ಕೋರ ವ್ಯವಸ್ಥೆಯ ದಗಲ್ಪಾಜಿತನ, ದಬ್ಬಾಳಿಕೆ, ದೌರ್ಜನ್ಯಗಳ ಧ್ವನಿ ಪಠಲಗ=
ತಟ್ಟುವಂತೆ ಮನದಟ್ಟು ಮಾಡಲೆತ್ನಿಸುತ್ತಾ ಬಂದಿದೆ. ನಿರಾಂಕಾರಿಗಳು, ನಿರಾಯುಧರು ನಿರಾಶವಾದಿಗಳು, ನಿತ್ಯಾಕಾಶಕ್ಕೆ ಮುಖ ಮಾಡಿ ನೀಯತ್ತಾ
ದುಡಿದು ನಿತ್ಯ ಬದುಕನ್ನು ತಳ್ಳುವ ನೀಲಮೇಘರಾದ ದಲಿತರು ಚರಿತ್ರೆಯಲ್ಲಿ ಅನ್ಯರ ಏಳಿಗೆಗಾಗಿ ಅನನ್ಯ ಬದುಕನ್ನು ನೂಕಿದ ದಯಾಮಯಿಗಳ
ದಯಾಮಯಿಗಳಾದ ದಲಿತರ ಚರಿತ್ರೆಯನ್ನು ಕೃಷಿ ಮಾಡಿ ಸಮಾಜದ ಏಳಿಗೆಗಾಗಿ ಅವರನ್ನು ಮಾನಸಿಕವಾಗಿ ಸಿದ್ಧತೆಗೊಳಿಸಿ ಸ್ವಾಭಿಮಾ ಮತ್ತು ಆತ್ಮ ಗೌರವದಿಂದ ತಲೆ ಎತ್ತಿ ನಿಷ್ಕಳಂಕಿತವಾಗಿ ಬಾಳುವಂತೆ ಮಾಡುವುದೇ ದ.ಸಂ.ಸದ ಹಿಂದಿರುವ ಪರಿಶ್ರಮದ ಉದ್ದೇಶ.
ನನ್ನ ಬಾಲ್ಯ ಯೌವ್ವನದ ಸುಗಂಧ ದಿನಗಳನ್ನೆಲ್ಲಾ ದಲಿತ ಚಳುವಳಿಗೆ ಮುಡುಪಾಗಿಟ್ಟು ಹೋರಾಟವನ್ನೇ ಉಂಡು, ಹಾಸಿ, ಹೊದ್ದು
ಮಲಗಿದ ನಾನು ನನ್ನ ಕುಟುಂಬ ಅಂದುಕೊಂಡಿದ್ದರಲ್ಲಿ ಅರ್ಧ ಕಾಸಿನಷ್ಟು ಸೇವೆಯನ್ನು ನಿಷ್ಪಕ್ಷಪಾತವಾಗಿ, ನ್ಯಾಯಯುತವಾಗಿ ದಲಿಹ
ಚಳಿವಳಿಗಾಗಿ ಸಲ್ಲಿಸಿದ್ದೇನೆ. ಚಳಿವಳಿಯ ವೇಗದಲ್ಲಿ ನನ್ನ ವರಿಗೆ ಕೆಲವು ಸಂದಿಗ್ಧ ಸ್ಥಿತಿಗತಿಗಳಲ್ಲಿ ನೋವುಂಟಾಗಿದ್ದರೆ ಆಳವಾದ ಮನಸ್ಸಿನಿಂದ

ಪಟಾಕಿಗಳು ನಮ್ಮ ಹೋರಾಟದ ಸದ್ದುದ್ದೇಶ ಪೊಲೀಸರ ವರ್ತನೆಗೆ ತಣ್ಣೀರೆರಚಿದಂತಿದೆ. ಪೊಲೀಸರು ದಾಖಲಿಸಿಕೊಂಡ ಕೇಸ್‌ ಗಳೆಲ್ಲಾ ಕೋರ್ಟುಗಳಲ್ಲಿ ಕೊಂಡಿ ಕಳಚಿ ಬಿದ್ದು ಹೋದವು.
ಅದೆಷ್ಟೋ ಭಾರಿ ನೆಂಟರಿಷ್ಟರು ಸಂಘ – ಗಿಂಘ ಬೇಡ ಎಂದು ನನ್ನ ತಂದೆಯಷ್ಟೇ ನನ್ನ ಭವಿಷ್ಯದ ಬೆಳಕನ್ನು ಬಯಸುತ್ತಿದ್ದ ಮುಗ್ಧ
ಅನಕ್ಷರಸ್ಥನನ್ನ ತಾಯಿಯಯ ಅಣ್ಣ ನನ್ನ ಮಾವ ದಿವಂಗತ ವೆಂಕಟಪ್ಪ ಆ ಸಂಘದ ಸಹವಾಸ ಬಡವರಾದ ನಮಗ್ಯಾಕಪ್ಪ ಎಂದು ಬುದ್ದಿ
ಹೇಳುತ್ತಿದ್ದರು. ನೆಂಟರಿಷ್ಟರು ನಮ್ಮೂರಿನ ದಲಿತರು ಈತನನ್ನು ಭೂ ಮಾಲೀಕರು ಎಲ್ಲಿಯಾದರೂ ತಲೆ ಹೊಡೆದು ಹಾಕುತ್ತಾರೆಂದು ಬೇಸರ
ಪಡುತ್ತಿದ್ದರು. ಅತ್ತಾ ಕಡೆ ನೆಲದಮಂಗಲ, ತುಮಕೂರು ಪ್ರಾಂತ್ಯದಲ್ಲಿ ಸವರ್ಣೀಯ ಮುಖಂಡರನೇಕರು ಹೋಲೆ-ಮಾದಿಗ ನನ್ನ ಮಕ್ಕಳು
ಜೀತಮಾಡಿಕೊಂಡು ಸುಮ್ಮನಿದ್ದರು. ದಲಿತ ಸಂಘವನ್ನು ಸಿಟಿಯಿಂದ ತಂದು ಇಲ್ಲಿ ಪರಚಯಿಸಿ ಆ ನನ್ನ ಮಕ್ಕಳ ಮಾತ್‌ನಾಡಿಸಕ್ಕಾಗಲ್ಲ. ಮೊದಲು
ಆ ನನ್ ಮಗನ್ ಕಾಲು ಮುರಿಬೇಕು. ಎಂದು ಶಪಿಸುತ್ತಾ ಎಷ್ಟೋ ಭಾರಿ ನಮ್ಮವರು ಸೇರಿದಂತೆ ಮೇಲ್ವಾತಿ ಪುಂಡ ಹುಡುಗರನ್ನು ಬಿಟ್ಟು ದಾರಿ
ಬಟ್ಟೆ ಕಾಯಿಸಿದರು. ಸಣ್ಣ ಪುಟ್ಟ ಹೊಟ್ಟೆ ಪಾಡಿನ ಪುಡಿ ಮೇಲ್ಟಾತಿ ಪತ್ರಿಕೆಗಳಲ್ಲಿ ಅಪಪ್ರಚಾರ ಲೇಖನ ಬರೆಸಿದರು. ಬರು ಬರುತ್ತಾ ಸಂಘಟನೆ
ಬಲವರ್ಧನೆಗೊಂಡು ಭೂ ಮಾಲೀಕರ ದೌರ್ಜನ್ಯದ ಮನಸ್ಥಿತಿ ಮಿಡತೆಗಳಿಂದ ಮರ್ದಿತವಾದ ಆನೆಯಂತಾದವು. ದ.ಸಂ.ಸ ಬೆಳವಣಿಗೆಯು
ಇರುವೆಗಳ ಸಾಲು ಚದುರುತ್ತಿದೆ, ಹಾವಿನ ಹೆಡೆಯಲ್ಲಿ ನಡುಕ ಹುಟ್ಟುತ್ತಿದೆಯೆಂಬ ಪಾಪ ಪ್ರಜ್ಞೆ ಅವರನ್ನು ಕಾಡಿ ನಿದ್ರಾಭಂಗಮಾಡಿತು. ಬರು
ಬರುತ್ತಾ ಜಮೀನ್ದಾರುಗಳು ಜೀತಗಾರರನ್ನು ನಯವಾಗಿ ಜೀತ ವಿಮುಕ್ತಿಗೊಳಿಸಿ ಅವರಲ್ಲಿ ಸಿಹಿ ಮಾತನಾಡುತ್ತಾ ನುಣುಚಿಕೊಳ್ಳುತ್ತಾ ದಲಿತ
ನನ್ನ ಮಕ್ಕಳ ಸಹವಾಸವೇ ಬೇಡವೆಂಬ ಭಯ ಅವರನ್ನು ಕಾಡಿತು. ದ.ಸಂ.ಸ ಭೂ ಮಾಲೀಕರಿಗೆ ಬೆದರುಗೊಂಬೆಯಾಯಿತು. ದ.ಸಂ.ಸ ಚಳವಳಿ
ಉದಯದ ದಿನಗಳಲ್ಲಿ ದಲಿತ ಚಳವಳಿಗಾಗಿ ಪ್ರಾಣಾರ್ಪಣೆಗೆ ಸಿದ್ಧನಿದ್ದೇನೆ. ಅವಿವಾಹಿತನಾಗಿ ಚಳವಳಿಗೆ ಅರ್ಪಿಸಿಕೊಳ್ಳುತ್ತೇನೆ ಎಂದು ದ.ಸಂ.ಸ
ಸಭೆಯಲ್ಲಿ ಕೈಯೆತ್ತಿ ಮುಂದೆ ಬಂದ ಮೊದಲಿಗ ನಾನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಕೊಳ್ಳುತ್ತೇನೆ. ದ.ಸಂ.ಸ
ಸಂಘಟಿಸುವ ಆರಂಭದಲ್ಲಿ ಹತ್ತಾರು ದಿನಗಳುಬಟ್ಟೆ ಬದಲಿಸದೆ ಹಳ್ಳಿ ಹಳ್ಳಿಗಳಲ್ಲಿ ದಲಿತ ಕೇರಿಗಳಲ್ಲಿ, ದಲಿತರನ್ನು ಕಲೆ ಹಾಕಿ ದ.ಸಂ.ಸ
ಧೈಯೋದ್ದೇಶ ಸಾರುತ್ತಾ ದಲಿತ ಕ್ರಾಂತಿ ಗೀತೆಗಳು, ದಲಿತ ಜಾಗೃತಿಯ ಬೀದಿ ನಾಟಕಗಳನ್ನು ಪ್ರದರ್ಶಿಸುವುದು. ದಲಿತರ ಮೇಲೆ ಹಲ್ಲೆ ನಡೆದ
ಸ್ಥಳಗಳಿಗೆ ಯಾವುದೆ ಭೀತಿಯಿಲ್ಲದೆ ದ.ಸಂ.ಸ ಯುವಕರ ಗುಂಪಿನೊಂದಿಗೆ ಹೋಗಿ ಅವರಿಗೆ ಮಾನಸಿಕ ರಕ್ಷಣೆ ನೀಡುವುದು. ಹಳ್ಳಿ ಹಳ್ಳಿಗಳಿಗೆ
ಸೈಕಲ್ಲುಗಳಲ್ಲಿ ಹೋಗಿ ಭೇಟಿ ನೀಡಿ ಅವರ ಸಂಕಷ್ಟ ವಿಚಾರಿಸಿ ಅವರಿಗೆ ನೆರವಾಗುವುದರೊಂದಿಗೆ ತೊಡಗಿಸಿಕೊಂಡಿದ್ದೆನು. ದ.ಸಂ.ಸ ಚಳವಳಿ
ಕಟ್ಟುವ ದಿನಗಳಲ್ಲಿ ನನ್ನ ಹೆಗಲಲ್ಲಿ ಯಾವಾಗಲೂ ಒಂದು ಕೈ ಚೀಲ ಅದರಲ್ಲಿ ಅಂಬೇಡ್ಕರ್ ವಿಚಾರ ಹಾಗೂ ಕ್ರಾಂತಿ ಗೀತೆ, ದಲಿತರ ಅರ್ಜಿಗಳ
ಕಂತೆ, ನನ್ನನ್ನು ನೋಡಿದ ನನ್ನ ಸ್ಕೂಲ್ ಕಾಲೇಜ್ ಸಹಪಾಟಿಗಳು ತುಮಕೂರು ತಾಲ್ಲೂಕು ಸೊರೆಕುಂಟೆ ಸಹ ವಿದ್ಯಾರ್ಥಿಗಳಾದ ನಂದೀಶ (ಈಗ
ಪೊಲೀಸ್‌ ಪೇದೆ ನೌಕರರಾಗಿದ್ದಾರೆ), ಸಿದ್ದಪ್ಪ ( ಇವರು ಶಿಕ್ಷಕರಾಗಿದ್ದಾರೆ) ಇತರರನೇಕರು ಪಾವಗಡದ ಜಯಸಿಂಹ (ಡಿ. ಎಸ್. ಎಸ್.
ನಲ್ಲಿದ್ದಾರೆ) ನನ್ನ ಒಳ್ಳೆ ಸ್ನೇಹಿತರು, ನಾವೆಲ್ಲರು ಹಾಸ್ಟೆಲ್ ವಿದ್ಯಾರ್ಥಿಗಳಾಗಿದ್ದೆವು. ಇವರುಗಳಿಗಿಂತ ನಾನು ಸ್ವಲ್ಪ ಭಿನ್ನ ಸ್ವಭಾವದವನಾಗಿದ್ದೆ.
ಶಾಲಾ ಕಾಲೇಜು ಹಾಸ್ಟೆಲುಗಳಿಗೆ ಡಾ|| ಅಂಬೇಡ್ಕರ್ ಭಾವಚಿತ್ರ ಹಿಡಿಸಲು ಹೋರಾಟ ಮಾಡಿ ಯಶಸ್ವಿಯಾಗಿದ್ದೆ. ತೋಳಿನಲ್ಲಿ ಬ್ಯಾಗು
ನೇತುಹಾಕಿ ಕುರುಚಲು ಗಡ್ಡದಾರಿಯಾದ ನನ್ನನ್ನು ಮೇಲೆ ಹೆಸರಿಸಿದ ಸ್ನೇಹಿತರನೇಕರು ದಲಿತ ಬಂದ ಎಂದುಗೇಲು ಮಾಡುತ್ತಿದ್ದರು. ಹೋರಾಟ,
ಅಂಬೇಡ್ಕರ್ ಎಂಬ ಪಿತ್ತಾ ನೆತ್ತಿ ಹತ್ತಿಕೊಂಡಿದ್ದ ನನ್ನ ವಿಚಾರವಾಗಿ ಮೇಲ್ವಾತಿ ಶಿಕ್ಷಕರು ಅಸಮಧಾನದಿಂದ ನೋಡುತ್ತಿದ್ದರು. ತುಮಕೂರು
ಜೂನಿಯರ್ ಕಾಲೇಜ್ನ 2ನೇ ಪಿ.ಯು.ಸಿ. ಪರೀಕ್ಷೆಯಲ್ಲಿ ಮೇಲ್ಟಾತಿ ಶಿಕ್ಷಕರೊಬ್ಬರು ನನಗೆ ಪ್ರತ್ಯೇಕ ಡೆಸ್ಕ್ ವ್ಯವಸ್ಥೆ ಮಾಡಿ ನನ್ನನ್ನು ಪರೀಕ್ಷಾ
ಸಹವಿದ್ಯಾರ್ಥಿಗಳಿಂದ ತುಸುದೂರದಲ್ಲಿ ಕೂರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆಗೊಳಿಸಿದ್ದರು. ಇದರ ಉದ್ದೇಶ ನಾನು ಶಾಲಾ ದಿನಗಳನ್ನು ದ.ಸಂ.ಸ
ಹೋರಾಟದಲ್ಲಿ ಕಳೆದುಬಿಟ್ಟಿದ್ದೀನಿ ಅಕ್ಕ-ಪಕ್ಕದ ವಿದ್ಯಾರ್ಥಿಗಳಿಂದ ಕಾಪಿ ಹೊಡೆದು ಪಾಸಾಗಿ ಬಿಡುತ್ತಾನೆ ಎಂದುಕೊಂಡಿದ್ದ ಇವರು ಇದನ್ನು
ತಪ್ಪಿಸುವ ಉದ್ದೇಶ ಹೊಂದಿದ್ದರು ಅವರ ಊಹೆ ಸುಳ್ಳಾಗಿ ಒಳ್ಳೆ ಫಲಿತಾಂಶವೇ ನನ್ನ ದಾಯಿತು. ನೂರಾರು ಹಳ್ಳಿಗಳಲ್ಲಿ ದಲಿತರೊಟ್ಟಿಗೆ ಉಂಡು
ಅಲ್ಲಿಯೇ ಮಲಗಿ ಅವರ ಮನವೊಲಿಸಿ ಸಂಘಟಿಸುವಲ್ಲಿ ಶ್ರಮಿಸುತ್ತಿದ್ದೆನು.
ದ.ಸಂ.ಸ ಹೋರಾಟಗಳ ಸನ್ನಿವೇಶಗಳಲ್ಲಿ ಕಾಲೇಜು ಪರೀಕ್ಷೆಗಳಿಗೆ ಸಹ ಗೈರುಹಾಜರಾದದುಂಟು. ನನ್ನ ಶಿಕ್ಷಣ ಕುಂಠಿತವಾಗಲು ದ.ಸಂ.ಸ =ಚಳವಳಿ ಜವಾಬ್ದಾರಿ ಸಹ ಮುಖ್ಯವಾಯಿತು. ಶಾಲಾ ಶಿಕ್ಷಣಕ್ಕಿಂತ ಕೇಂದ್ರ ಸಾಮಾಜಿಕ ಶಿಕ್ಷಣ ಹಿತ ತಂದಿತು. ನೆಲಮಂಗಲದ ಹತ್ತಿರ ಆಲೂರು ಗ್ರಾಮದಲ್ಲಿ ಸಂಘದ ಸಭೆಯೊಂದನ್ನು ಆಯೋಜಿಸಿದ್ದೆವು. ದಲಿತರು ನನ್ನ ಬರುವಿಕೆಗಾಗಿ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ನನ್ನ ಚಿಕ್ಕಪ್ಪ ತೀರಿಕೊಂಡ ಸುದ್ದಿ ಬಂತು. ದ.ಸಂ.ಸ ಸಭೆಯನ್ನು ಪೂರ್ಣ ಮುಗಿದ ನಂತರವೇ ಎದ್ದು ಹೋದದ್ದು. ಪರಿಚಿತ ದಲಿತ ನೌಕರರು ಅಧಿಕಾರಿಗಳು ದಂಘಟನೆ ಕಟ್ಟುವ ಆರಂಭದಲ್ಲಿ ನಾನು ಎದುರಾದರೆ ತಲೆ ತಪ್ಪಿಸಿಕೊಂಡು ಹೋಗುತ್ತಿದ್ದರು. ನಮ್ಮ ಜೊತೆ ಮಾತನಾಡಿದರೆ ಭೂ ಮಾಲೀಕರ ಹಣ್ಣಿಗೆ ಬೀಳುತ್ತೇವೆಂಬ ಭಯ ಅವರನ್ನು ಕಾಡಿತ್ತು ದಲಿತ ದಲಿತರನ್ನೇ ಹಿಬ್ಬಾಗ ಮಾಡಿ ನಡೆದ ಹೊಡೆದಾಟಗಳನ್ನು ಗ್ರಾಮೀಣ ಪ್ರದೇಶಗಳ ದಲಿತರನ್ನು ಸವರ್ಣೀಯ ಭೂ ಮಾಲೀಕರ ಅಡಕತ್ತರಿಯಿಂದ ವಿವೇಚನೆಗೊಳಿಸುವ ಯತ್ನದಲ್ಲಿ ದೈರ್ಯಮಾಡಿ ನಡೆಸಿದ ನಿರಂತರ ಹೋರಾಟಗಳ ಮರುಸಿನಲ್ಲಿ ನಾವು ಸಾಗುತ್ತಿರುವ ಅಪಾಯಗಳ ದಿಕ್ಕು ಗೋಚರವಾಗದೆ ಹಳ್ಳಿಯನ್ನೇ ತೊರೆಯಬೇಕಾಯಿತು. ಭೂ ಮಾಲೀಕ ಹಾಗೂ ಅದರ ನಾಕು ನಾಯಿಗಳಂತಾಡುತ್ತಿದ್ದ ಪೊಲೀಸರ ಕಾಟ ತಾಳಲಾರದೆ ತಿಂಗಳು ಗಟ್ಟಳೆ ಭೂಗತವಾಗುತ್ತಿದ್ದ ದಿನ ಇಂದು ಬೇರೆ ರೂಪ ಪಡೆದುಕೊಂಡಂತಾಗಿ -ಮ ಹೋರಾಟ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಮನವೊಲಿಸಿದೆ ಎನಿಸಿದೆ ಅಂತು ಇಂತು ನನ್ನನ್ನು ಕಂಡರೆ ಅವರಿಗೆ ನಡುಕ, – ಡುಕಕ್ಕೆ ಹೋರಾಟದ ಎಲೆಕ್ಟಿಕ್ ಪಾಕ್ ಸರ್ಕ್ಯೂಟ್ ಇರಬಹುದು. ದಲಿತ ಚಳವಳಿ ಮುಂದು ಮಾಡಿ ದಲಿತ ಮುಖಂಡರು ರಾಜಕೀಯವಾಗಿ ಬಳೆಯುತ್ತಾರೆಂಬ ನಡುಕದಿಂದ ನನ್ನನ್ನು ಸಮಾಜ ಗುಮಾನಿಯಿಂದ ಅನುಮಾನಿಸುವಂತೆ ಅಪ ಪ್ರಚಾರವನ್ನೆಬ್ಬಿಸುತ್ತಿದ್ದು, ಆತನ ನಡತೆ ಾಯಿಲ್ಲ, ಭ್ರಷ್ಟ, ಸುಳ್ಳ, ನಕ್ಸಲೈಟ್, ಮಾರಕಾಸ್ತ್ರಗಳನ್ನು ದೊಂದಿದ್ದಾನೆ. ಹಣ ಮಾಡಿ ಬಿಟ್ಟಿದ್ದಾನೆ. ಕಾರು ಬಂಗಲೆ ಸಂಪಾಗಿಸಿ ಬಿಟ್ಟಿದ್ದಾನೆ

ದಲಿತ ಚಳವಳಿ

1976-77ರಲ್ಲಿಯೇ ತುಮಕೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಸಂಪರ್ಕ ಹೊಂದಿದ್ದ ಯುವಕ ಎನ್.ಮೂರ್ತಿ ಭ್ರೂಣಾವ್ಯವಸ್ಥೆಯಲ್ಲಿದ್ದ ದಲಿತ ಚಳವಳಿಯ ಧೈಯೋದ್ದೇಶಕ್ಕೆ ಮಾರು ಹೋಗಿ ತನ್ನ ಸಂಗಡಿಗರೊಂದಿಗೆ ವಿದ್ಯಾರ್ಥಿಗಳ ಸಂಗಮ ಕ್ಷೇತ್ರ. ವಿದ್ಯೆಯ ತವರೂರೆಂದು, ಖ್ಯಾತಿವೆತ್ತ ಜಿಲ್ಲಾ ಕೇಂದ್ರವಾದ ತುಮಕೂರಿನ ದಲಿತ ಚಳವಳಿಯೊಂದಿಗೆ, ಸಂಪರ್ಕ ಪಡೆಯುವ ಮೂಲಕ ದಲಿತ ಚಳವಳಿಯ ಸಂಸ್ಥಾಪಕ ಸದಸ್ಯ ನಾಯಕರಲ್ಲಿ ಒಬ್ಬನಾಗಲು ಕಾರಣವಾಯಿತು.
1976ರ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ಪ್ರಥಮ ಸಮಾವೇಶಕ್ಕೆ ತನ್ನ ವಿದ್ಯಾರ್ಥಿ ಒಕ್ಕೂಟವನ್ನು ಒಗ್ಗೂಡಿಸಿ ತನ್ನ ನಾಯಕತ್ವದಲ್ಲಿ ಶಿವಮೊಗ್ಗ ಸಮಾವೇಶದಲ್ಲಿ ಪಾಲ್ಗೊಂಡು ಸಂಸ್ಥಾಪಕ ಸದಸ್ಯ ನಾಯಕರಲ್ಲಿ ಒಬ್ಬರೆನಿಸಿಕೊಂಡ ಆ ಸಂದರ್ಭ ಮೂರ್ತಿಯ ಹೋರಾಟಕ್ಕೆ ಸ್ಫೂರ್ತಿಯಾಯಿತು. 1978-79ರಲ್ಲಿ ಎಸ್.ಎಸ್.ಎಲ್.ಸಿ. ಪ್ರೌಢಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣ ನಾಗಿ ಹೆಮ್ಮೆಯ ಕಡಲಲ್ಲಿ ತೇಲಿದನು. ತನ್ನ ಮುಂದಿನ ಪದವಿ ಪೂರ್ವ ಶಿಕ್ಷಣಕ್ಕಾಗಿ, ದಲಿತ ಚಳವಳಿಯ ಕೇಂದ್ರ ಸ್ಥಾನ ತುಮಕೂರಿಗೆ ತೆರಳಿ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಿರಿಯ ವಿದ್ಯಾಲಯದಲ್ಲಿ ಪಿ.ಸಿ.ಎಂ.ಬಿ. ವಿಷಯವನ್ನು ಆಯ್ಕೆ ಮಾಡಿಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಿದನು.
ಪಾರು
1977ರಲ್ಲಿ ಮೂರ್ತಿಯ ಜೀವನದಲ್ಲಿ ಮರೆಯಲಾಗದ ಕಹಿ ಘಟನೆಯೊಂದು ನಡೆಯಿತು. ಶಾಲೆಯ ರಜಾದಿನಗಳಲ್ಲಿ ತನ್ನ ಊರಾದ ಚಿಕ್ಕ ಮಾರನಹಳ್ಳಿಯಲ್ಲಿ ಸಂಗಡಿಗರೊಡನೆ ಆಟವಾಡುತ್ತಿದ್ದಾಗ, ಮುಳ್ಳಿನ ಪೊದೆಯಿಂದ ಹರಿದು ಬಂದ ನಾಗರ ಹಾವು ಯುವಕ ಮೂರ್ತಿಯ ಕಾಲನ್ನು ಸುತ್ತಿಕೊಂಡಿತು. ಅಲ್ಲಿದ್ದ ಹುಡುಗರೆಲ್ಲ ಹೆದರಿ ಓಡಿ ಹೋದರು ಅಷ್ಟರಲ್ಲಿ ಹಾವು ಯುವಕನನ್ನು ಕಚ್ಚಿ ಪೊದೆಯೊಳಗೆ ನುಸುಳಿಹೋಗಿತ್ತು. ನೋವಿನಿಂದ ಚೀರಿದ ಯುವಕ ಸ್ವಲ್ಪ ದೂರ ಓಡಿ ಬಂದು ನಿಂತು ನೋಡಿದಾಗ ಹಾವು ಕಚ್ಚಿದ ಸ್ಥಳದಲ್ಲಿ ರಕ್ತ ಚಿಮ್ಮು ತಿತ್ತು ಧೈರ್ಯಗುಂದದ ಯುವಕ ಎನ್.ಸಿ.ಸಿ.ಯಲ್ಲಿ ಪಡೆದಿದ್ದ ತರಬೇತಿಯಿಂದ ಉತ್ತೇಜಿತನಾಗಿ ಹಾವು ಕಡಿದ ಜಾಗವನ್ನು ತನ್ನ ಕೈಲಿದ್ದ ಕುಡುಗೋಲಿನಿಂದ ಕುಯ್ದು ವಿಷದ ರಕ್ತವನ್ನು ಹೊರ ಚೆಲ್ಲಿ ದಾರದಿಂದ ಕಟ್ಟನ್ನು ಕಟ್ಟಿ ಪ್ರಥಮ ಚಿಕಿತ್ಸೆಯನ್ನು (First Aid) ಮಾಡಿ ಪ್ರಾಣಪಾಯದಿಂದ ಪಾರಾದ, ಅಕ್ಕ ಪಕ್ಕದ ಹಳ್ಳಿಗರ ಹೆಗ್ಗಳಿಕೆಗೆ ಪಾತ್ರನಾದ, ನಂತರ ಹಳ್ಳಿ ವೈದ್ಯರಿಂದ ಚಿಕಿತ್ಸೆ ಮಾಡಿಸಿದರು. ಬಾಲಕನ ಧೈರ್ಯವನ್ನು ಕೊಂಡಾಡಿದರು.
ಇನ್ನು ಅದೇ ತಿಂಗಳಲ್ಲಿ ಮತ್ತೆರಡು ಗಂಡಾಂತರಗಳಿಗೆ ಯುವಕ ಮೂರ್ತಿ ಸಿಲುಕ ಬೇಕಾಯಿತು. ಒಂದು ರಾತ್ರಿ ಮಲಗಿರುವಾಗ “ಜರಿ” ಹಚ್ಚಿ ರಾತ್ರಿ ಎಲ್ಲಾ ಉರಿ ಸಂಕಟವನ್ನು ಅನುಭವಿಸಬೇಕಾಯಿತು. ಮತ್ತೊಂದು ವಾರದಲ್ಲೆ, ಯಾವುದೊ ಮದುವೆ ಸಂದರ್ಭದ ದಿನ ರಾತ್ರಿ ಹತ್ತಲೆಯಲ್ಲಿ ವಿಷದ “ಚೇಳು” ಕಚ್ಚಿ ಯುವಕನಿಗೆ ತೀವ್ರ ಯಾತನೆಯಾಯಿತು. ಹಳ್ಳಿ ವೈದ್ಯರಿಂದ ಚಿಕಿತ್ಸೆ ಮಾಡಿಸಿ, ಈ ಮೂರು ಗಂಡಾಂತರಗಳು

1976-77ರಲ್ಲಿಯೇ ತುಮಕೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಸಂಪರ್ಕ ಹೊಂದಿದ್ದ ಯುವಕ ಎನ್.ಮೂರ್ತಿ ಭ್ರೂಣಾವ್ಯವಸ್ಥೆಯಲ್ಲಿದ್ದ ದಲಿತ ಚಳವಳಿಯ ಧೈಯೋದ್ದೇಶಕ್ಕೆ ಮಾರು ಹೋಗಿ ತನ್ನ ಸಂಗಡಿಗರೊಂದಿಗೆ ವಿದ್ಯಾರ್ಥಿಗಳ ಸಂಗಮ ಕ್ಷೇತ್ರ. ವಿದ್ಯೆಯ ತವರೂರೆಂದು, ಖ್ಯಾತಿವೆತ್ತ ಜಿಲ್ಲಾ ಕೇಂದ್ರವಾದ ತುಮಕೂರಿನ ದಲಿತ ಚಳವಳಿಯೊಂದಿಗೆ, ಸಂಪರ್ಕ ಪಡೆಯುವ ಮೂಲಕ ದಲಿತ ಚಳವಳಿಯ ಸಂಸ್ಥಾಪಕ ಸದಸ್ಯ ನಾಯಕರಲ್ಲಿ ಒಬ್ಬನಾಗಲು ಕಾರಣವಾಯಿತು.
1976ರ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ಪ್ರಥಮ ಸಮಾವೇಶಕ್ಕೆ ತನ್ನ ವಿದ್ಯಾರ್ಥಿ ಒಕ್ಕೂಟವನ್ನು ಒಗ್ಗೂಡಿಸಿ ತನ್ನ ನಾಯಕತ್ವದಲ್ಲಿ ಶಿವಮೊಗ್ಗ ಸಮಾವೇಶದಲ್ಲಿ ಪಾಲ್ಗೊಂಡು ಸಂಸ್ಥಾಪಕ ಸದಸ್ಯ ನಾಯಕರಲ್ಲಿ ಒಬ್ಬರೆನಿಸಿಕೊಂಡ ಆ ಸಂದರ್ಭ ಮೂರ್ತಿಯ ಹೋರಾಟಕ್ಕೆ ಸ್ಫೂರ್ತಿಯಾಯಿತು. 1978-79ರಲ್ಲಿ ಎಸ್.ಎಸ್.ಎಲ್.ಸಿ. ಪ್ರೌಢಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣ ನಾಗಿ ಹೆಮ್ಮೆಯ ಕಡಲಲ್ಲಿ ತೇಲಿದನು. ತನ್ನ ಮುಂದಿನ ಪದವಿ ಪೂರ್ವ ಶಿಕ್ಷಣಕ್ಕಾಗಿ, ದಲಿತ ಚಳವಳಿಯ ಕೇಂದ್ರ ಸ್ಥಾನ ತುಮಕೂರಿಗೆ ತೆರಳಿ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಿರಿಯ ವಿದ್ಯಾಲಯದಲ್ಲಿ ಪಿ.ಸಿ.ಎಂ.ಬಿ. ವಿಷಯವನ್ನು ಆಯ್ಕೆ ಮಾಡಿಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಿದನು.
ಪಾರು
1977ರಲ್ಲಿ ಮೂರ್ತಿಯ ಜೀವನದಲ್ಲಿ ಮರೆಯಲಾಗದ ಕಹಿ ಘಟನೆಯೊಂದು ನಡೆಯಿತು. ಶಾಲೆಯ ರಜಾದಿನಗಳಲ್ಲಿ ತನ್ನ ಊರಾದ ಚಿಕ್ಕ ಮಾರನಹಳ್ಳಿಯಲ್ಲಿ ಸಂಗಡಿಗರೊಡನೆ ಆಟವಾಡುತ್ತಿದ್ದಾಗ, ಮುಳ್ಳಿನ ಪೊದೆಯಿಂದ ಹರಿದು ಬಂದ ನಾಗರ ಹಾವು ಯುವಕ ಮೂರ್ತಿಯ ಕಾಲನ್ನು ಸುತ್ತಿಕೊಂಡಿತು. ಅಲ್ಲಿದ್ದ ಹುಡುಗರೆಲ್ಲ ಹೆದರಿ ಓಡಿ ಹೋದರು ಅಷ್ಟರಲ್ಲಿ ಹಾವು ಯುವಕನನ್ನು ಕಚ್ಚಿ ಪೊದೆಯೊಳಗೆ ನುಸುಳಿಹೋಗಿತ್ತು. ನೋವಿನಿಂದ ಚೀರಿದ ಯುವಕ ಸ್ವಲ್ಪ ದೂರ ಓಡಿ ಬಂದು ನಿಂತು ನೋಡಿದಾಗ ಹಾವು ಕಚ್ಚಿದ ಸ್ಥಳದಲ್ಲಿ ರಕ್ತ ಚಿಮ್ಮು ತಿತ್ತು ಧೈರ್ಯಗುಂದದ ಯುವಕ ಎನ್.ಸಿ.ಸಿ.ಯಲ್ಲಿ ಪಡೆದಿದ್ದ ತರಬೇತಿಯಿಂದ ಉತ್ತೇಜಿತನಾಗಿ ಹಾವು ಕಡಿದ ಜಾಗವನ್ನು ತನ್ನ ಕೈಲಿದ್ದ ಕುಡುಗೋಲಿನಿಂದ ಕುಯ್ದು ವಿಷದ ರಕ್ತವನ್ನು ಹೊರ ಚೆಲ್ಲಿ ದಾರದಿಂದ ಕಟ್ಟನ್ನು ಕಟ್ಟಿ ಪ್ರಥಮ ಚಿಕಿತ್ಸೆಯನ್ನು (First Aid) ಮಾಡಿ ಪ್ರಾಣಪಾಯದಿಂದ ಪಾರಾದ, ಅಕ್ಕ ಪಕ್ಕದ ಹಳ್ಳಿಗರ ಹೆಗ್ಗಳಿಕೆಗೆ ಪಾತ್ರನಾದ, ನಂತರ ಹಳ್ಳಿ ವೈದ್ಯರಿಂದ ಚಿಕಿತ್ಸೆ ಮಾಡಿಸಿದರು. ಬಾಲಕನ ಧೈರ್ಯವನ್ನು ಕೊಂಡಾಡಿದರು.
ಇನ್ನು ಅದೇ ತಿಂಗಳಲ್ಲಿ ಮತ್ತೆರಡು ಗಂಡಾಂತರಗಳಿಗೆ ಯುವಕ ಮೂರ್ತಿ ಸಿಲುಕ ಬೇಕಾಯಿತು. ಒಂದು ರಾತ್ರಿ ಮಲಗಿರುವಾಗ “ಜರಿ” ಹಚ್ಚಿ ರಾತ್ರಿ ಎಲ್ಲಾ ಉರಿ ಸಂಕಟವನ್ನು ಅನುಭವಿಸಬೇಕಾಯಿತು. ಮತ್ತೊಂದು ವಾರದಲ್ಲೆ, ಯಾವುದೊ ಮದುವೆ ಸಂದರ್ಭದ ದಿನ ರಾತ್ರಿ ಹತ್ತಲೆಯಲ್ಲಿ ವಿಷದ “ಚೇಳು” ಕಚ್ಚಿ ಯುವಕನಿಗೆ ತೀವ್ರ ಯಾತನೆಯಾಯಿತು. ಹಳ್ಳಿ ವೈದ್ಯರಿಂದ ಚಿಕಿತ್ಸೆ ಮಾಡಿಸಿ, ಈ ಮೂರು ಗಂಡಾಂತರಗಳು