ಈ ಪ್ರಪಂಚದ ಭೂಪಟದಲ್ಲಿ ಭಾರತ ವಿಭಿನವಾದ ಮಾನವ ಸಂಪು ಜೀವತ್ಸವನ್ನು ಪಡೆದುಕೊಂಡ ಮಹಾನ್ ರಾಷ್ಟ್ರ: ಭಾರತದ ನಕ್ಷೆಯಲ್ಲಿ ಕರ್ನಾಟಕ ವಿಶಾಲವಾದ ಸುಂದರ ಭೂಪ್ರದೇಶವನ್ನು ಹೊಂದಿದ ರಾಜ್ಯ,
ಕರ್ನಾಟಕ ರಾಜ್ಯವನ್ನು ಆಳಿ ಅಳಿದ ಅರಸರಾಗಲಿ ದೇಶವನ್ನು ಆಕ್ರಮಿಸಿದ ಆಂಗ್ಲರಾಗಲಿ ಈ ನಾಡಿಗೆ ಯಾವ ಸುಧಾರಣೆಯನ್ನು ತಂದಿಲ್ಲ ಅದೇನೆ ಇರಲಿ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಎರಡು ವರ್ಗಗಳು ಇಂದಿಗೂ ಸಮಾಜಕ್ಕೆ ಮಾರಕವೆಂಬ ಕತ್ತನ್ನು ಅದು ಯಾವುದೆಂದರೆ ಸಮಾನತೆಯ ಅಂತರ, ಒಂದು ಭೂಮಾಲಿಕ ವರ್ಗ ಮತ್ತೊಂದು ದುಡಿಯುವ ಶ್ರಮಿಕ ವರ್ಗ, ಇನ್ನೂ ಪಟ್ಟಣ ಪ್ರದೇಶದಲ್ಲಿ ಮೂರು ವರ್ಗಗಳು ಹಂತ ಹಂತವಾಗಿ ರೂಪಿತವಾಗಿದೆ. ಒಂದು ಕೆಳವರ್ಗ, ಮೊತ್ತೊಂದು ಮಧ್ಯಮವರ್ಗ ಹಾಗೂ ಮ ವರ್ಗ. (LIG) (MIG) (HIG) ಈ ವರ್ಗಗಳಿಂದ ಕೂಡಿದ ಈ ನಾಡಿನ ಜನತೆ ವೈಧಿಕರು ಮಾಡಿಟ್ಟ ಕಂದಾಚಾರಗಳ, ಗೊಡ – ಸಂಪ್ರದಾಯಗಳ, ಮೇಲು ಕೀಳಿನ ತಾರತಮ್ಯದ ಅಮಲಿನಲ್ಲಿ ಮೇಲಿನ ವರ್ಗ ಮೇಲೆಯೆ? ಕೆಳಗಿನ ವರ್ಗ ಕೆಳಗೆಯೆ ಇರಲಿ ಎಂಬ ಮೌಡ್ಯತೆಯ ಕಟ್ಟುಪಾಡುಗಳನ್ನು ಸೃಷ್ಟಿಸಿಕೊಂಡು ಮಾನವ ಸಮಾನತೆಯನ್ನೇ ಮರೆತು ಕೆಳವರ್ಗವನ್ನು ಪಾತಾಳಕ್ಕೆ ತುಳಿದಿದೆ ಇನ್ನೂ ತುಳಿಯಿತ್ತಲು ಇದೆ.
ಈ ವಿಶಾಲ ಕರ್ನಾಟಕದಲ್ಲಿ ಸಂಘ ಜೀವನ ಅತ್ಯಂತ ಸುಲಭ, ಸ್ವಾಭಿಮಾನ, ಆತ್ಮಗೌರವದ ಪರಿವೆ ಇಲ್ಲದೆ, ಪಶು ಜೀವನೋಪಾಯ ಮತ್ತು ರಾಜೀಮನೋಭಾವನೆಯ, ಸರಳ ಜೀವನಕ್ಕೆ ಹೊಂದಿ ಕೊಂಡಂತಹ, ಜನತೆಯನ್ನು ಇಂದು ಗುರುತಿಸ ಬಹುದಾಗಿದೆ.
ಆದ್ದರಿಂದಲೇ ಈ ನೆಲದಲ್ಲಿ ಯಾವುದೇ ಚಳವಳಿಯಾಗಲಿ, ಕ್ರಾಂತಿಯ ಸ್ವರೂಪವನ್ನು ಪಡೆಯದೆ, ಯಾವುದೆ ಬದಲಾವಣೆಯ ರೂಪ ಪಡೆದು ಬಿಸಿ ಗಾಳಿಯನ್ನು ಎಬ್ಬಿಸಿಲ್ಲವೆಂಬುದನ್ನು ಇಂದು ಕಾಣಬಹುದಾಗಿದೆ. ಈ ಮಣ್ಣಿನ ಗುಣ, ಪ್ರಕೃತಿಯ ಮೇಲೆ ಹಾಗೂ ಪರಿಸರ ಮತ್ತು ಸಂಸ್ಕೃತಿ ಮತ್ತು ನಾಡು, ನುಡಿ, ಜಲ, ಸಂಪತ್ತು ವಿದೇಶಿಗರನ್ನು ಆಕರ್ಷಿಸಿದೆಯೆಂದರೆ ಅತಿಶಯೋಕ್ತಿ ಯಾಗಲಾರದು. ಈ ನಾಡಿನ ನಿಸರ್ಗದಲ್ಲಿ ಬೆರೆತು. ಪ್ರಕೃತಿಯ ಮಡಿಲಲ್ಲಿ ಅಡಗಿರುವ ಸಮಾನತೆಯ ಸಂಸ್ಕೃತಿಯನ್ನು ವಿಕಾರತೆಯ ಪ್ರಕೋಪದಲ್ಲಿ ನೂಕಿ ವಿರೂಪಗೊಳಿಸಿ ಜಾರಿ ಪದ್ಧತಿಯೆಂಬ ಅಳತೆಗೊಲಿನಿಂದ ಮೇಲು ಕೀಳು ಎಂಬ ಮನೋಭಾವದ ಮೈಲಿಗೆಯನ್ನು ಮಾಡಿ ಬಡವ ಬಲ್ಲಿದರೆಂಬ ತಾರತಮ್ಯದ ವಿಷ ವೃಕ್ಷಕ್ಕೆ ನೀರೆರೆದು ಬೆಳೆಸಿ, ಸಮತಾ ಸಮಾನತೆಯ, ಸಮಾಜದ ಪ್ರಗತಿಗೆ ಹಾಗೂ ನಾಡಿನ ಮುನ್ನಡೆಗೆ ತಲೆ ಬೇನೆಯಾಗಿದೆ ಜಾತಿಪದ್ಧತಿ. ಒಂದು ಕಡೆ ಶತಶತಮಾನಗಳಿಂದ ಇದರ ನಿರ್ಮೂಲನೆಗಾಗಿಯೇ ಹಲವಾರು ವಿಧವಾಗಿ ವಿವಿಧ ರೀತಿಯ ಹೋರಾಟದ ಕ್ರಾಂತಿಗಳು ನಡೆದಿವೆ, ಇಂದಿಗೂ ನೆಡೆಯುತ್ತಲಿವೆ.
10ನೇ ಶತಮಾನದಲ್ಲಿ ಜನ್ಮವೆತ್ತ ಪಂಪ, ರನ್ನ ರಿಂದ ಪ್ರಾರಂಭವಾದ ರಚನಾ ಕ್ರಾಂತಿ ದೇವರ ದಾಸಿಮಯ್ಯ, ಹರಿಹರ, ರಾಘವಾಂಕ, ಜನ್ನರಿಂದ ಹಿಡಿದು ಆಧುನಿಕತೆಯ ಕವಿಶ್ರೀಗಳಾದ ಕುವೆಂಪು, ಬೇಂದ್ರೆ, ಮಾಸ್ತಿ ಇನ್ನು ಮುಂತಾದ ಕವಿ ಪುಂಗವರು ನಾಣ್ಯದ ಒಂದು ಮುಖವಾದರೆ, ಮಗದೊಂದು ಮುಖ ಅಸಮಾನತೆಯ ನಿರ್ಮೂಲನೆಯ, ಹೋರಾಟದ ನೇತಾರರಾಗಿ ಕ್ರಾಂತಿಕಾರಕ ಸಿದ್ದ ಪುರುಷರಾದ, ಜಗಜ್ಯೋತಿ ಬಸವಣ್ಣ, ಹರಳಯ್ಯ ಅಲ್ಲಮ ಪ್ರಭು, ಮಡಿವಾಳ ಮಾಚಯ್ಯ, ಮಾತೆ ಮಹಾದೇವಿ ಅಕ್ಕ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಂಭೋಳಿ ನಾಗಿದೇವ, ಅನಾಮಿಕ ನಾಚಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ, ಹೆಂಡದ ಮಾರಯ್ಯ, ಕಕ್ಕೆಯ ಮಾರಯ್ಯ, ವೈದ್ಯ ಸಂಗಣ್ಣ, ಶರಣ ಸಂತರು ಸೇರಿದಂತೆ, ಅನಂತರ ಬಂದ ದೇಶ ಪ್ರೇಮಿಗಳಾದ ಹೈದರಾಲಿ, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಒನಕೆ ಓಬವ್ವ, ಮದಕರಿ ನಾಯಕ, ಕಿತ್ತೂರ ರಾಣಿ ಚನ್ನಮ್ಮ ಸಂಗೊಳ್ಳಿ ರಾಯಣ್ಣ ಈ ಮಹನೀಯರು ಸಹ ಸಮಾನತೆಗಾಗಿ ಒಂದಲ್ಲ ಒಂದು ರೀತಿಯ ಹೋರಾಟದ ಕ್ರಾಂತಿಕಾರಕರಾಗಿ ಇಂದಿಗೂ ಅಮರರಾಗಿ ಚಿರಸ್ಥಾಯಿಯಾಗಿ ನಾಡಿನ, ದಾರಿದೀಪವಾಗಿ ಬೆಳಗುತ್ತಿದ್ದಾರೆ. ಇಂತಹ ವೀರಯೋಧ ರಂತಹ ಗಂಡು ಮೆಟ್ಟಿದ ನಾಡು ಕರ್ನಾಟಕ.
ವಿಶಾಲ ಕರ್ನಾಟಕದ ನಕ್ಷೆಯಲ್ಲಿ 28 ಜಿಲ್ಲೆಗಳು, 175 ತಾಲ್ಲೋಕು ಕೇಂದ್ರಗಳು 745 ಹೋಬಳಿಗಳು, 224 ವಿಧಾನ ಸಭೆ ಕ್ಷೇತ್ರಗಳು * ಲೋಕ ಸಭಾ ಕ್ಷೇತ್ರಗಳು ಸೇರಿ ಸುಮಾರು 29,386 ಹಳ್ಳಿಗಳನ್ನೊಳ ಗೊಂಡ ವಿಶಾಲ ಕರ್ನಾಟಕ ಎಂದು ಖ್ಯಾತಿ ಪಡೆದಿದೆ.
ಅಖಂಡ ಕರ್ನಾಟಕದಲ್ಲಿ ಮುಂಚೂಣಿಯ ನೇತಾರರು ಅನೇಕ ಮಂದಿ ಜನ್ಮತಾಳಿ ಮಿಂಚಿ ಮರೆಯಾಗಿದ್ದಾರೆ. ಅನೇಕಾನೇಕ ಸಂಘ-ಸಂಸ್ಥೆಗಳು ಸಹ ಸೇವಾಮನೋಭಾವನೆಯಿಂದ ಜನರ ಮಧ್ಯೆ ಬಂದು ಮರೆಯಾಗಿವೆ. ಆದರೆ ಶೋಷಿತರ ಸರ್ವಾಂಗೀಣ ಕಲ್ಯಾಣಕ್ಕಾಗಿಯೇ *ತಿ ಅಂಬೇಡ್ಕ‌ರ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಜನ್ಮತಾಳಿದ ದಲಿತ ಸಂಘರ್ಷ ಸಮಿತಿಯು ಉದಯವಾಗಿ 25 ವರ್ಷಗಳು ಸಂದಿವೆ

ಚಿಕ್ಕಂದಿನಿಂದಲೇ ಕಪ್ಪು-ಬಿಳಿಪು, ಬಡವ-ಬಲ್ಲಿದ, ಮೇಲು-ಕೀಳು, ತಾರತಮ್ಯದ ಮೈಲಿಗೆಯ ಪರಿಚಯ ವಾಯಿತು.
ಅಜ್ಞಾನದ ಕಗ್ಗತ್ತಲೆಯ ಕಡಲಲ್ಲಿ ಊತು ಹೋಗಿದ್ದ ತನ್ನ ಕುಟುಂಬ, ತನ್ನ ಬಂಧು – ಭಾಂದವರ ಚಿಂತೆ ಮನಸ್ಸಿನಲ್ಲಿ ಕಾಡ್ತಿಚ್ಚಿನಂತೆ ಕಾಡಿತು, ಸ್ವಾಭಿಮಾನ, ಆತ್ಮಗೌರವರಹಿತ ಬಾಳಿನ ಕಹಿಯನ್ನು ಬಾಲ್ಯದಲ್ಲಿ ಅನುಭವಿಸಿ ಅನ್ಯಜಾತಿಯ ಹುಡುಗರಂತೆ ತಾನುಸಹದ ನಂತ ಮುಂದೆ ಬರಬೇಕು, ಎಂಬ ಹಂಬಲ ಬಾಲಕನ ನಿದ್ರೆಯನ್ನು ಕಿತ್ತು ಕೊಂಡಿತು.
ಸ್ಥಳೀಯವಾಗಿ ಅಂತಹ ಉತ್ತಮ ಶಾಲೆಗಳಾಗಲಿ ಉಪಾಧ್ಯಾಯರಾಗಲೀ ಇಲ್ಲದಿದ್ದರು ಸಹ ಬಾಲಕ ಶಾಲೆಗೆ ಹೋಗಲು ಯಾರಿಂದಲೂ ಹೇಳಿಸಿ ಕೊಂಡವನಲ್ಲ ಹಳ್ಳಿಯ ಜೀವನ ಅಲ್ಲಿಯ ಪರಿಸರದ ಕಹಿ ಸಂದರ್ಭಗಳು ವಿದ್ಯಾಭ್ಯಾಸದ ಸಮಯದಲ್ಲಿ ಮಹಾರ ಯಾಗಿ ಚಿತ್ತಾಕರ್ಷಕ ವ್ಯಸನದಲ್ಲಿ ತೊಡಗಿಸುತ್ತಿತ್ತು. ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸದ ದೈನಂದಿನ ಬದುಕನ್ನು ಸೂಕ್ಷ್ಮ ಮನಸ್ಸಿನ ಸಂಕಷ್ಟದಲ್ಲಿ ಕಳೆದ. ದಿನ ಕಳೆದಂತೆ ತಮ್ಮದೆ ಆದ ಕೃಷಿ ಭೂಮಿಯಲ್ಲಿ ನೇಗಿಲು ಹಿಡಿದು ವ್ಯವಸಾಯ ಮಾಡುವುದು ಆ ಸಣ್ಣ ಕೈಗಳಂದಕ್ಕೆ ಕಟ್ಟಿಗೆ ಹೊಡೆದು ಮಾರುವುದು, ಕೈತೋಟದಲ್ಲಿ ತರಕಾರಿ ಬೆಳೆದು ಮಾರಿ, ತನ್ನ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ಪಡೆದುಕೊಳ್ಳುವವರೆ ಗೋಪಾಲಕನಂತೆ ತನ್ನ ಮನೆಯ ಗೋವುಗಳನ್ನು ಬಿಡುವಿನಲ್ಲಿ ಕಾಯುತ್ತಿದ್ದ.
ಮುಂದಿನ ಮಾಧ್ಯಮಿಕ ವಿದ್ಯಾಭ್ಯಾಸಕ್ಕಾಗಿ ಗ್ರಾಮದ ಕಹಿ ವಾತಾವರಣದಲ್ಲಿ ನಲುಗಿ ಹೋಗಿದ್ದ ಬಾಲಕ ತನ್ನೂರಿಗಿಂತ ಒಂದಿಷ್ಟು ನಾಗರೀಕತೆಯ ಅರಿವಿದ್ದ ನೆಲಮಂಗಲ ತಾಲ್ಲೂಕಿನ ಹೋಬಳಿ ಕೇಂದ್ರವಾದ ತ್ಯಾಮಗೊಂಡ್ಲುವಿನಲ್ಲಿ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸಕ್ಕಾಗಿ 1971ರಲ್ಲಿ ಮುಂದುವರಿಸಿದರೂ ಸಹ. ಬಾಲ್ಯದಲ್ಲಿ ತನ್ನ ಮನಸ್ಸಿನ ಮೇಲೆ ಆದ ಆರದ ಗಾಯಗಳಿಂದ ಮುಕ್ತನಾಗಲಿಲ್ಲ. ಆಗಾಗಲೇ ಶೋಷಿತರ ಬದುಕಿನ ಸ್ಪಷ್ಟ ಚಿತ್ರಣದ ನಕ್ಷೆ ಮೂರ್ತಿಯ ಮನದಾಳದಲ್ಲಿ ಮನೆ ಮಾಡಿತ್ತು ವಿದ್ಯಾಭ್ಯಾಸದ ದಿನಗಳೆಲ್ಲಾ ವಿದ್ಯಾರ್ಥಿನಿಲಯ ಗಳಲ್ಲಿ ಕಳೆದ ಯುವಕ ಶಾಲಾರಜ್ಞಾ ದಿನದಲ್ಲಿ ತನ್ನೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಒಂದು ದಿನ ಹುಡುಗರೆಲ್ಲಾ ಹಬ್ಬದ ಹುರುಪಿನಲ್ಲಿ ಹೊಸ ಬಟ್ಟೆ ತೊಟ್ಟು ಕ್ರೀಡೆಯಲ್ಲಿ ತೊಡಗಿದ್ದರು. ಊರಿನ ಮಧ್ಯದ ಬಾವಿಕಟ್ಟೆಯ ಮೇಲಿನ ವಿಶಾಲ ಸ್ಥಳದಲ್ಲಿ ಅಕ್ಕ-ಪಕ್ಕದ ಗ್ರಾಮದ ಭೂಮಾಲೀಕ ಯಾಜಮಾನರುಗಳು ಕಲೆತು, ಹರಟೆ ಹೊಡೆಯುತ್ತಾ ಕಾಲಹರಣ ಮಾಡುವಾಗ ಆಟ-ಪಾಠದಲ್ಲಿ ಮುಂದಿದ್ದು ಹಬ್ಬದ ನಡಗರದಲ್ಲಿ ಹೊಸ ಬಟ್ಟೆ ತೊಟ್ಟು ಮಿಂಚುತ್ತಿದ್ದ ಬಾಲಕ ಮೂರ್ತಿಯನ್ನು ಕುರಿತು ” ಏ ಹುಡ್ಗ ಬಾರೊ ಇಲ್ಲಿ ಯಾರ್ ಮಗೊನೀನು ಎಂದರು ತನ್ನ ತಂದೆ ಹೆಸರು ಹೇಳಿಕೊಂಡ ಬಾಲಕನನ್ನು ವಕ್ರ ದೃಷ್ಟಿಯಿಂದ ನೋಡಿದ ಯಜಮಾನರುಗಳು ನಿಮ್ ಜಾತಿಯವರೆಲ್ಲಾ ಓದು ಬರಹ ಕಲಿತದ್ದಕ್ಕೆ ಮಳೆ ಹೋಗಿ ಮುಗಿಲು ಸೇರಿ ಕೊಂಡಿದ್ದು ಎಂದು ವ್ಯಂಗ ವಾಡಿದರು”. ಮತ್ತೊಂದು ದಿನ ದಲಿತ ಕಾಲೋನಿಗೆ ಕೂಲಿ ಕೆಲಸದ ಆಳುಗಳನ್ನು ಕರೆಯಲು ಬಂದ ಭೂಮಾಲೀಕರೊಬ್ಬರು ತನ್ನ ಸಂಬಂಧಿಕ ಸಂಸಾರಸ್ಥರನ್ನು ಕುರಿತು ಏಕ ವಚನದಲ್ಲಿ ದಲಿತ ಮಹಿಳೆಯರಿಗೆ ಅಗೌರವವಾಗಿ ಸಂಭೋದಿಸಿ ಕರೆದದ್ದು, ಈ ಸ್ವಾಭಿ ಮಾನ ಆತ್ಮಾಗೌರವಗಳು ಮನದಲ್ಲಿ ಮನೆ ಮಾಡಿ ಕೊಂಡಿದ್ದ ಬಾಲಕನ ಮನಸ್ಸನ್ನು ಘಾಸಿ ಗೊಳಿಸಿದವು.
ಶ್ರೀಮತಿ ಮಂಗಲ ಶ್ರೀಮತಿ “ఎంట ಕೃಕೆಯಲ್ಲಿ, ಜದಲ್ಲಿಯ ನದಿಂದಾಗಿ ದವರು ತನ್ನ ಶ್ರೀಮಂತಲ್ಲಿ ನೊಂದು ವೇಯುತ್ತಿದ್ದ ಮೂರ್ತಿ, ದಿಗಳ ಅರಿವಿನ ಯೋಚನೆಗಳ ಊರ ಹಬ್ಬದ ದಿನಗಳಲ್ಲಿ ದಲಿತ ಕೇರಿಗೆ ಮೆರವಣಿಗೆಯಲ್ಲಿ ದೇವರುಗಳ ತರುವುದನ್ನು ಗ್ರಾಮದ ಕೆಲವು ಸ್ವಯಂ ಘೋಷಿತ ಮುಂದುವರೆದ ಜಾತಿಯ ಮುಖಂಡರು ನಿಷೇದಿಸಿದ್ದರು, ಇಂತಹ ಸಾಮಾಜಿಕ ಕಟ್ಟುಪಾಡನ್ನು ವಿದ್ಯಾರ್ಥಿ ಜೀವನ ದಲ್ಲಿಯೇ ಈ ಧೀರ ಬಾಲಕ ವಿರೋಧಿಸಿ ಮೇಲು ಜಾತಿಯ ಯಜಮಾನರ ಮನವೊಲಿಸಿ ದೇವರನ್ನು ದಲಿತಕೇರಿಗೆ ತರಿಸುವುದರಲ್ಲಿ ಯಶಸ್ವಿಯಾದನು. ಬಾಲ್ಯದಲ್ಲಿಯೇ ಮೊಳೆತ ಹೋರಾಟ ಮನೋಭಾವದ ಬೀಜ ಈ ಬಾಲಕನಲ್ಲಿ ಮೊಳಕೆ ಒಡೆಯಿತು. ಶಾಲೆಯಲ್ಲಿ ಮೊದಲನೇ ಸಾಲಿನಲ್ಲಿ ಕುಳಿತು, ಉಪಾಧ್ಯಾಯರ ಪ್ರಶ್ನೆಗಳಿಗೆ ದಿಟ್ಟತನದಿಂದ ಉತ್ತರಿಸುತ್ತಿದ್ದ ಮೂರ್ತಿ ಯ ಜಾಣೆ, ವಿದ್ವತ್, ಗುರು ವೃಂದವನ್ನು ಅಚ್ಚರಿಗೊಳಿಸುತ್ತಿತ್ತು. ಕ್ರೀಡೆಯಲ್ಲಿದ್ದ ಕ್ರಿಯಾಶೀಲತೆ, ಮತ್ತು ಶ್ರಮ ಈತನನ್ನು ಶಾಲಾ ದಿನಗಳಲ್ಲಿಯೇ ಮುಂಚೂಣಿಯ ಪ್ರಶಸ್ತಿ ಪುರಸ್ಕಾರಗಳತ್ತ ಕೊಂಡೊಯ್ಯತು. ಶ್ರದ್ದೆ, ಪರಿಶ್ರಮ, ನಿಷ್ಠೆ ಮತ್ತು ತಾಳ್ಮೆಯ ಸೂಕ್ಷ್ಮತೆಯ ಸ್ವಭಾವಗಳಿಂದ ಗುರುವೃಂದಕ್ಕೆ ಆಕರ್ಷಿತನಾದ ಬಾಲಕ ತನ್ನ ಜೀವಯಸ್ಸಿನಲ್ಲಿ ಅಂದು ಕಠಿಣ ಪರೀಕ್ಷೆ ಎಂದೆ ಕರೆಯಲ್ಪಟ್ಟ 7ನೇ ತರಗತಿಯ ಜಿಲ್ಲಾ ಮಟ್ಟದ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಪೂರ್ಣನಾಗಿ ಶಿಕ್ಷಕರನ್ನು ನಿಬ್ಬೆರಗುಗೊಳಿಸಿ, ಶೋಷಿತ ವರ್ಗದ ಜನರು, ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತಾಗಿ ಬದುಕಿನ ಭರವಸೆಯೇ ಪಬ್ಬರ ತನ್ನ ಕುಟುಂಬದ ಆಶಾಕಿರಣ ವಾದನು.
ಪ್ರೌಡ ಶಿಕ್ಷಣ
1976-77 ರಲ್ಲಿ ಪ್ರೌಢ ಶಿಕ್ಷಣಕ್ಕಾಗಿ ಅದೇ ತ್ಯಾಮಗೊಂಡ್ಲು ಟೌನ್‌ನ ಮಾಕನ ಕುಪ್ಪೆ ತಿಮ್ಮೆಗೌಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇನ್ನು ಮುಂದುವರೆಸಿ. ತನ್ನ ಸಹ ಪಾರಿವಿದ್ಯಾರ್ಥಿಗಳಲ್ಲಿ ಅತ್ಯಂತ ಪುಟ್ಟ ಹುಡುಗನಾದ ಯುವಕ ಎನ್.ಮೂರ್ತಿ ಪಾಠ ಪ್ರವಚನಕ್ಕೆ

ಅಷ್ಟೆ ಅಲ್ಲದೆ, ಕ್ರೀಡೆಗಳಲ್ಲಿಯೂ ಪುಟಿಯುವ ಚಂಡಿನಂತೆ ಸ್ಫೋಟಿಸುತ್ತಿದ್ದು, ಹಲವು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದ, ಅಥ್ಲೆಟಿಕ್ಸ್‌ ಕ್ರೀಡೆಯಲ್ಲಿ ರಾಜ್ಯಮಟ್ಟದ ಆಟಗಾರನಾಗಿ ಆಯ್ಕೆ ಗೊಂಡನಲ್ಲದೆ ರಾಜ್ಯದ ಪ್ರತಿಷ್ಠಿತ ವಿದ್ಯಾರ್ಥಿಗಳ ಶಿಸ್ತು ಬದ್ಧ ಸಂಸ್ಥೆಯಾದ ಎನ್.ಸಿ.ಸಿ.ಯಲ್ಲಿ ಸಾರ್ಜೆಂಟ್ (ಕ್ಯಾಪ್ಟನ್) ಆಗಿ ಹಲವು ವಿವಿಧ ಶಿಸ್ತು ಬದ್ಧ ತರಬೇತಿಗಳಲ್ಲಿ ಪರಿಣತಿಯ ಪಕ್ವತೆ ಪಡೆದು ಶಿಕ್ಷಕರಿಗೆ ಹಾಗೂ ಸಮಾಜಕ್ಕೆ ಶಿಸ್ತಿನ ಮುಂದಾಳಾಗಿ ಕಂಗೊಳಿಸುತ್ತಿದ್ದನು. ಬಾಲಕ ಮೂರ್ತಿಯ ಸ್ಪೋಟಕ ತೀಕ್ಷಣತೆಯನ್ನು ಗಮನಿಸುತ್ತಿದ್ದ ಉಪಾಧ್ಯಾಯರು, ಒಮ್ಮೊಮ್ಮೆ ಈ ವಿದ್ಯಾರ್ಥಿಯನ್ನು ಕುರಿತು ಅಂದು ಮಾಕನಕುಪ್ಪೆ ತಿಮ್ಮೆ ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಅಜೀಜ್ ಅಹಮದ್ (ಎ.ಎ.) ಎಂಬುವರು ಗಣೇಶನ ಕಿವಿಯಂತೆ ಹೋಲಿಕೆ ಇರುವ ಈ ಯುವಕ ಮುಂದೊಂದು ದಿನ ಸಮಾಜದ ಗಣ್ಯ ವ್ಯಕ್ತಿಯಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದು ಉಂಟು. ಪ್ರೌಢ ವಿದ್ಯಾಭ್ಯಾಸದ 8ನೇ ತರಗತಿಯ ದಿನಗಳು ತುರ್ತುಪರಿಸ್ಥಿತಿಯ ಕಾಲಘಟ್ಟ – ತುರ್ತು ಪರಿಸ್ಥಿತಿಯ ಬಿಸಿಯ ದಿನಗಳು ಬಿಸಿ ರಕ್ತದ ವಿದ್ಯಾರ್ಥಿ ಯುವಕರ ಮೇಲೆ ಚಳವಳಿಯ ಛಾಪನ್ನು ಚೆಲ್ಲಿತು. ಶಾಲೆಯ ಮುಂಚೂಣಿ ವಿದ್ಯಾರ್ಥಿ ನಾಯಕನಾಗಿದ್ದ ಮೂರ್ತಿ ಸಮಾಜ ಪರಿವರ್ತಕ ಲೋಕ ನಾಯಕ ಜಯಪ್ರಕಾಶ್ ನಾರಾಯಣ್‌ರವರ ಚಳವಳಿಯತ್ತ ಆಕರ್ಷಿತನಾದನು.
ಕುಟುಂಬದ ಸರ್ವಜವಾಬ್ದಾರಿ ಹೊತ್ತ. ತಂದೆ ನರಸಿಂಹಯ್ಯ ತನ್ನ ವೃತ್ತಿ ವ್ಯಾಪಾರದಲ್ಲಿ ತೀವ್ರ ನಷ್ಟ ಹೊಂದಿ ಆಸ್ತಂಗತರಾದರು ಆದರೂ ಧೃತಿಗೆಡದ ತರುಣ ಮೂರ್ತಿ ತನ್ನ ವಿದ್ಯಾಭ್ಯಾಸವನ್ನು ಸಂಕಷ್ಟದಿಂದಲೇ ಮುಂದುವರಿಸಿ, ವಿದ್ಯಾಭ್ಯಾಸದ ಜೊತೆ-ಜೊತೆಯ ಲ್ಲಿಯೇ ತನ್ನ ಹೋರಾಟದ ಚಟುವಟಿಕೆ ಯನ್ನು ದಲಿತ ಸಂಘರ್ಷ ಸಮಿತಿಯೊಂದಿಗೆ, ಮುಂದುವರೆಸತೊಡಗಿದನು.
ದಲಿತ ಚಳವಳಿ
1976-77ರಲ್ಲಿಯೇ ತುಮಕೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಸಂಪರ್ಕ ಹೊಂದಿದ್ದ ಯುವಕ ಎನ್.ಮೂರ್ತಿ ಭ್ರೂಣಾವ್ಯವಸ್ಥೆಯಲ್ಲಿದ್ದ ದಲಿತ ಚಳವಳಿಯ ಧೈಯೋದ್ದೇಶಕ್ಕೆ ಮಾರು ಹೋಗಿ ತನ್ನ ಸಂಗಡಿಗರೊಂದಿಗೆ ವಿದ್ಯಾರ್ಥಿಗಳ ಸಂಗಮ ಕ್ಷೇತ್ರ. ವಿಧ್ಯೆಯ ತವರೂರೆಂದು, ಖ್ಯಾತಿವೆತ್ತ ಜಿಲ್ಲಾ ಕೇಂದ್ರವಾದ ತುಮಕೂರಿನ ದಲಿತ ಚಳವಳಿಯೊಂದಿಗೆ, ಸಂಪರ್ಕ ಪಡೆಯುವ ಮೂಲಕ ದಲಿತ ಚಳವಳಿಯ ಸಂಸ್ಥಾಪಕ ಸದಸ್ಯ ನಾಯಕರಲ್ಲಿ ಒಬ್ಬನಾಗಲು ಕಾರಣವಾಯಿತು.
1976ರ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ಪ್ರಥಮ ಸಮಾವೇಶಕ್ಕೆ ತನ್ನ ವಿದ್ಯಾರ್ಥಿ ಒಕ್ಕೂಟವನ್ನು ಒಗ್ಗೂಡಿಸಿ ತನ್ನ ನಾಯಕತ್ವದಲ್ಲಿ ಶಿವಮೊಗ್ಗ ಸಮಾವೇಶದಲ್ಲಿ ಪಾಲ್ಗೊಂಡು ಸಂಸ್ಥಾಪಕ ಸದಸ್ಯ ನಾಯಕರಲ್ಲಿ ಒಬ್ಬರೆನಿಸಿಕೊಂಡ ಆ ಸಂದರ್ಭ ಮೂರ್ತಿಯ ಹೋರಾಟಕ್ಕೆ ಸ್ಫೂರ್ತಿಯಾಯಿತು. 1978-79ರಲ್ಲಿ ಎಸ್.ಎಸ್.ಎಲ್.ಸಿ. ಪ್ರೌಢಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣ ನಾಗಿ ಹೆಮ್ಮೆಯ ಕಡಲಲ್ಲಿ ತೇಲಿದನು. ತನ್ನ ಮುಂದಿನ ಪದವಿ ಪೂರ್ವ ಶಿಕ್ಷಣಕ್ಕಾಗಿ, ದಲಿತ ಚಳವಳಿಯ ಕೇಂದ್ರ ಸ್ಥಾನ ತುಮಕೂರಿಗೆ ತೆರಳಿ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಿರಿಯ ವಿದ್ಯಾಲಯದಲ್ಲಿ ಪಿ.ಸಿ.ಎಂ.ಬಿ. ವಿಷಯವನ್ನು ಆಯ್ಕೆ ಮಾಡಿಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಿದನು.
ಪಾರು
1977ರಲ್ಲಿ ಮೂರ್ತಿಯ ಜೀವನದಲ್ಲಿ ಮರೆಯಲಾಗದ ಕಹಿ ಘಟನೆಯೊಂದು ನಡೆಯಿತು. ಶಾಲೆಯ ರಜಾದಿನಗಳಲ್ಲಿ ತನ್ನ ಊರಾದ ಚಿಕ್ಕ ಮಾರನಹಳ್ಳಿಯಲ್ಲಿ ಸಂಗಡಿಗರೊಡನೆ ಆಟವಾಡುತ್ತಿದ್ದಾಗ, ಮುಳ್ಳಿನ ಪೊದೆಯಿಂದ ಹರಿದು ಬಂದ ನಾಗರ ಹಾವು ಯುವಕ ಮೂರ್ತಿಯ ಕಾಲನ್ನು ಸುತ್ತಿಕೊಂಡಿತು. ಅಲ್ಲಿದ್ದ ಹುಡುಗರೆಲ್ಲ ಹೆದರಿ ಓಡಿ ಹೋದರು ಅಷ್ಟರಲ್ಲಿ ಹಾವು ಯುವಕನನ್ನು ಕಚ್ಚಿ ಪೊದೆಯೊಳಗೆ ನುಸುಳಿಹೋಗಿತ್ತು. ನೋವಿನಿಂದ ಚೀರಿದ ಯುವಕ ಸ್ವಲ್ಪ ದೂರ ಓಡಿ ಬಂದು ನಿಂತು ನೋಡಿದಾಗ ಹಾವು ಕಚ್ಚಿದ ಸ್ಥಳದಲ್ಲಿ ರಕ್ತ ಚಿಮ್ಮು ತಿತ್ತು ಧೈರ್ಯಗುಂದದ ಯುವಕ ಎನ್.ಸಿ.ಸಿ.ಯಲ್ಲಿ ಪಡೆದಿದ್ದ ತರಬೇತಿಯಿಂದ ಉತ್ತೇಜಿತನಾಗಿ ಹಾವು ಕಡಿದ ಜಾಗವನ್ನು ತನ್ನ ಕೈಲಿದ್ದ ಕುಡುಗೋಲಿನಿಂದ ಕುಯ್ದು ವಿಷದ ರಕ್ತವನ್ನು ಹೊರ ಚೆಲ್ಲಿ ದಾರದಿಂದ ಕಟ್ಟನ್ನು ಕಟ್ಟಿ ಪ್ರಥಮ ಚಿಕಿತ್ಸೆಯನ್ನು (First Aid) ಮಾಡಿ ಪ್ರಾಣಪಾಯದಿಂದ ಪಾರಾದ, ಅಕ್ಕ ಪಕ್ಕದ ಹಳ್ಳಿಗರ ಹೆಗ್ಗಳಿಕೆಗೆ ಪಾತ್ರನಾದ, ನಂತರ ಹಳ್ಳಿ ವೈದ್ಯರಿಂದ ಚಿಕಿತ್ಸೆ ಮಾಡಿಸಿದರು. ಬಾಲಕನ ಧೈರ್ಯವನ್ನು ಕೊಂಡಾಡಿದರು.
ಇನ್ನು ಅದೇ ತಿಂಗಳಲ್ಲಿ ಮತ್ತೆರಡು ಗಂಡಾಂತರಗಳಿಗೆ ಯುವಕ ಮೂರ್ತಿ ಸಿಲುಕ ಬೇಕಾಯಿತು. ಒಂದು ರಾತ್ರಿ ಮಲಗಿರುವಾಗ ‘ಜರಿ’ ಕಚ್ಚಿ ರಾತ್ರಿ ಎಲ್ಲಾ ಉರಿ ಸಂಕಟವನ್ನು ಅನುಭವಿಸಬೇಕಾಯಿತು. ಮತ್ತೊಂದು ವಾರದಲ್ಲಿ, ಯಾವುದೊ ಮದುವೆ ಸಂದರ್ಭದ ದಿನ ರಾತ್ರಿ ಕತ್ತಲೆಯಲ್ಲಿ ವಿಷದ “ಚೇಳು” ಕಚ್ಚಿ ಯುವಕನಿಗೆ ತೀವ್ರ ಯಾತನೆಯಾಯಿತು. ಹಳ್ಳಿ ವೈದ್ಯರಿಂದ ಚಿಕಿತ್ಸೆ ಮಾಡಿಸಿ, ಈ ಮೂರು ಗಂಡಾಂತರಗಳು ಒಂದೇ ತಿಂಗಳಲ್ಲಿ ನಡೆದು ಪಾರಾಗಿ ಮತ್ತೆ ಎಂದಿನಂತೆ ಶಾಲೆಯ ಕಡೆ ಹೊರಟ.
ವಿದ್ಯಾರ್ಥಿ ನಾಯಕತ್ವ
1980ರಲ್ಲಿ ವಿದ್ಯಾರ್ಥಿ ಮುಖಂಡ ನಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಗ ಸಂಸ್ಥೆಯಾದ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ತುಮಕೂರು ಸಂಘಟನಾ ಕಾಯಡು ಆನೇಕ ದಲಿತ ವಿದ್ಯಾರ್ಥಿಗಳ ಪರವಾದ ಕಳ ವಿದ್ಯಾರ್ಥಿ ರೂಪಿಸಿ, ವಿದ್ಯಾರ್ಥಿ ನಿಲಯಗಳಲ್ಲಿ ನಡೆಯುತ್ತಿದ್ದ ಅನೇಕ ಪ್ರಾಚಾರಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದನಲ್ಲದೆ, ಜಿಲ್ಲಾ ಮಂಡಳಿಗಳನ್ನು ರೀತಿಯಲ್ಲಿ ಸಂಚರಿಸಿ, ದಲಿತ ವಿದ್ಯಾರ್ಥಿ ಸಮೂಹವನ್ನು ದಲಿತರಿಗಾಗುವ ಅನ್ಯಾಯದ ವಿರುದ್ಧ ಹೋರಾಟವಾದ ದಂತ ಚಿನ ಹೋರಾಟಕ್ಕೆ ನಾಂದಿ ಹಾಡಿದ.
ಆದೇ ಸಾಲಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತುಮಕೂರು ಜಿಲ್ಲಾ ಶಾಖೆಯ ಸಂಘಟನಾ ಸಂಚಾಲಕನಾಗಿ ಆಯ್ಕೆಗೊಂಡು ಅನಂತರ ದಲಿತರ ಮೇಲೆ ನಡೆದ ದೌರ್ಜನ್ಯ, ಹತ್ಯಾಕಾಂಡದ ಸ್ಥಳಗಳಾದ, ತುಮಕೂರು ಜಿಲ್ಲೆಯ ಹೆಬ್ಬರಿನಲ್ಲಿ ಅಂತರ್ ಜಾತಿ ಮೈಗೊಂಡು ದಲಿತ ಯುವಕನೊಬ್ಬನಿಗೇಸಿಕ್ ಎರು ಎಕರು ಕಣ್ಣುಗಳನ್ನು ಭಸ್ಮ ಮಾಡಿದ ಪ್ರಕರಣ, ದೇವರಾಯನ ಮರ್ಗದಲ್ಲಿ ಜಮೀನಸಾಹಾರ ಸಂಬಂಧಿಸಿದಂತೆ ನಡೆದ ದಲಿತನ ಕೊಲೆ ಪ್ರಕರಣ, ಗುಬ್ಬಿ ತಾಲ್ಲೋಕಿನ ದಾಸನಪುರದಲ್ಲಿ ನಡೆದ ಚಿಕ್ಕ ತಿಮ್ಮಯ್ಯನ ಕಗ್ಗೋಲೆ ಪ್ರಕರಣ, ಮಧುಗಿರಿ ತಾಲ್ಲೋಕು ಐ.ಡಿ. ಹಳ್ಳಿಯಲ್ಲಿ ದಲಿತ ಕೂಲಿಯವನನ್ನು ರೆಡ್ಡಿ ಜಾತಿಗೆ ಸೇರಿದ ಭೂ ಮಾಲೀಕರು ಸುಟ್ಟ ಇಟ್ಟಿಗೆಯಿಂದ ಹೊರದು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣ, ಮತ್ತು ದಲಿತರ ಗುಡಿಸಿಲಿಗೆ ಬೆಂಕಿ ಇಟ್ಟು ಭಸ್ಮ ಮಾಡಿದ ಸ್ಥಳಗಳಲ್ಲಿ ಮೊಕ್ಕಂ ಮಾಡಿ, ಅದು ದಲಿತ ಪರ ಹೋರಾಟ ಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದ ಯುವ ನಾಯಕ ಎನ್ ಮೂರ್ತಿಯೊಂದಿಗೆ, ಹಿರಿಯ ಒಡನಾಡಿಗಳಾದ ಕವಿ, ಪ್ರೋ|| ಕೆ.ಬಿ. ಸಿದ್ದಯ್ಯ, ಬಂದಗದ್ದೆ ನಾಗರಾಜ್ ಮದುಗಿರಿ ತಾಲ್ಲೂಕು, ಐ.ಡಿ. ಹಳ್ಳಿಯ ವಕೀಲರಾದ ಹೇಮಸುಧಾರೆಡ್ಡಿ (ಹನುಮಯ್ಯ) ಮುಂತಾದವರು ಜೊತೆಯಲ್ಲಿದ್ದು ಹೋರಾಟಕ್ಕೆ ಹೆಚ್ಚು ಹೆಚ್ಚು ಸ್ಪೂರ್ತಿ ನೀಡಿದರು.
ಅದೇ ಸರಿ ಸುಮಾರಿಗೆ, ಕೋಲಾರ ಜಿಲ್ಲೆ ಹುಣಸೇ ಕೋಟೆಯಲ್ಲಿ ಶೇಷ ಗಿರಿಯಪ್ಪನ ಕಗ್ಗೋಲೆ ಮತ್ತು ಈತನ ಮಗಳು ಅನುಸೂಯಮ್ಮನ ಮೇಲೆ ನೆಡೆದ ಅತ್ಯಾಚಾರ ಪ್ರಕರಣವನ್ನು ಪ್ರತಿಭಟಿಸಿ ಹುಣಸೇ ಕೋಟೆಯಿಂದ ಬೆಂಗಳೂರಿಗೆ ದಿನಾಂಕ: 14-4-1980ರಂದು ಕಾಲುನಡಿಗೆ ಜಾಥಾದಲ್ಲಿ ಶೇಷಗಿರಿಯಪ್ಪನ ಜ್ಯೋತಿ ಯನ್ನು ತರಲಾಯಿತು. ಅಂದಿನ ಮುಖ್ಯ ಮಂತ್ರಿಯಾಗಿದ್ದ ದಿವಗಂತ ಆರ್.ಗುಂಡುರಾವ್‌ರವರು, ಜಾಥಾದಲ್ಲಿ ನೂರಾರು ಮೈಲಿ ಕ್ರಮಿಸಿ ಬಳಲಿದ್ದ ಪ್ರತಿಭಟನಾಕಾರರ ಮೇಲೆ ಕಬ್ಬನ್ ಪಾರ್ಕ್‌ ಉಚ್ಚ ನ್ಯಾಯಲಯದ ಮೂಲೆಯ ರಸ್ತೆಯಲ್ಲಿ ಲಾಠಿ ಚಾರ್ಜ್ ಮಾಡಿಸಿದರು, ಪೋಲೀಸರು ಪ್ರತಿ ಭಟನಾಕಾರರನ್ನು ಅಮಾನುಷವಾಗಿ ಥಳಿಸಿ ರಕ್ತದ ಮಡುವಿನಲ್ಲಿ ಮುಳುಗಿಸಿದರು. ಪೋಲೀಸರ ಲಾಠಿಯಿಂದ ರಕ್ತದಲ್ಲಿ ತೊಯ್ದ ಯುವ ತರುಣ ವಿದ್ಯಾರ್ಥಿ ನಾಯಕ ಎನ್.ಮೂರ್ತಿ ಮತ್ತು ತನ್ನೂರಿನ ಮತ್ತೊಬ್ಬ ಹಿರಿಯ ವಿದ್ಯಾವಂತ ಗಂಗಯ್ಯ (ಹಾಲಿ ವಾಣಿಜ್ಯ ತೆರಿಗೆ ಇಲಾಖೆಯ ನೌಕರ) ಅನೇಕ ಹಿರಿಯ ಹೋರಾಟಗಾರರು, ಪೋಲೀಸರ ಕಬಂದ ಬಾಹುಗಳಿಗೆ ಸಿಲುಕಿ, ಕಬ್ಬನ್ ಪಾರ್ಕ್ ಪೋಲೀಸ್ ಠಾಣಿಯಲ್ಲಿ ಬಂಧನಕ್ಕೊಳಗಾಗಿದ್ದದ್ದು, ಮುಂದೆ ರಾಜ್ಯ ಮಟ್ಟದ ನಾಯಕನಾಗಲು ಮನೋಸ್ಥೆರ್ಯ ತಂದು ಕೊಟ್ಟಿತು ಅಂದಿನಿಂದ ತುಮಕೂರಿನ ಸಣ್ಣ ದ.ಸಂ.ಸ. ಸಭೆಯು ಯುವ ಹೋರಾಟಗಾರ ಎನ್.ಮೂರ್ತಿಯ ಮುಂದಾಳತ್ವವಿಲ್ಲದೆ ನಡೆಯುತ್ತಿರಲಿಲ್ಲ.
ಕಲೆ
ಶಾಲಾ, ಕಾಲೇಜು, ತಾಲ್ಲೋಕು, ಹಳ್ಳಿ ಸಭೆ ಸಮಾರಂಭಗಳಲ್ಲಿ ಎನ್.ಮೂರ್ತಿಯು, ಕಗ್ಗೋಲೆ ಗೊಳಗಾದ ಪತ್ರಸಂಗಪ್ಪ “ಜೇತದಟ್ಟಿ ರಂಗ’ನ ಬೀದಿ ನಾಟಕಗಳಲ್ಲಿ ಹಿನ್ನಲೆ ನಟನಾಗಿ ನಾಟಕಗಳಿಗೆ ಜೀವ ತುಂಬುತ್ತಿದ್ದು ಕಲೆಗೆ ನಾಂದಿ ಹಾಡಿದ.
ಅರಿವಿನ ಹಣತೆ
ತಮ್ಮ ಸಂಘಟನಾ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಲು ಸದಾ ತವಕ ಪಡುತ್ತಿದ್ದ ಎನ್.ಮೂರ್ತಿಯು ತನ್ನ ರಾದ ಚಿಕ್ಕಮಾರನಹಳ್ಳಿಯಲ್ಲಿ ದ.ಸಂ.ಸ. ಶಾಖೆಯನ್ನು ತೆರೆಯಲು ಆಲೋಚಿಸಿದಂತೆ ದಿನಾಂಕ: 14-4-1980 ರಂದು ಚಿಕ್ಕ ಮಾರನಹಳ್ಳಿ ತನ್ನ ಸಹಪಾರಿಗಳಾದ ಹಾಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೌಕರರಾಗಿರುವ ಗಂಗಯ್ಯ, ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೃದಾಯಪ್ಪ ಎನ್. ರಾಮಕೃಷ್ಣಯ್ಯ ರವರೊಂದಿಗೆ ಚರ್ಚಿಸಿ, ದ. ಸಂ.ಸ.ದ ಗ್ರಾಮ ಶಾಖೆಯನ್ನು ಬೀದಿ ನಾಟಕ ಮುಂತಾದ ದ.ಸಂ.ಸ ನಿಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಾಖೆಯನ್ನು ಉದ್ಘಾಟಿಸಲಾಯಿತು. ಈ ಸಮಾರಂಭದಲ್ಲಿ ತುಮಕೂರು ದ.ಸಂ. ಸಮಿತಿ ಸಂಸ್ಥಾಪಕ ನನ್ನ ಓಡ ನಾಡಿಗಳಾದ ಕವಿ ಪ್ರೋ ಕೆ.ಬಿ. ಸಿದ್ದಯ್ಯ, ಪ್ರೋ|| ರೇವಣ್ಣ, ಬಂದಗಡ್ಡೆ ನಾಗರಾಜ್ ಇವರೆಲ್ಲ ರೂ ಆಗಮಿಸಿದ್ದು ದಾಖಲಾರ್ಹ, ಆ ಮೂಲಕ ತನ್ನೂರು ಹಾಗೂ ತನ್ನ ತಾಲ್ಲೋಕು ನೆಲಮಂಗಲದಲ್ಲಿ ದ.ಸಂ.ಸ. ಸಂಘಟನೆಯನ್ನು ವಿಸ್ತರಿಸಲು ಕಾರಣ ಕರ್ತನಾದನು. ಆ ವೇಳೆಗಾಗಲೇ ಯುವ ಮುಂದಾಳು ಎನ್. ಮೂರ್ತಿಯ ಪದವಿ ಪೂರ್ವ ಶಿಕ್ಷಣ ಪೂರ್ಣ ಗೊಂಡಿತು.
ನೆಲಮಂಗಲದಲ್ಲಿ ಬಲಿಷ್ಠ ಸಂಘಟನೆಯನ್ನು ರೂಪಿಸುವ ಹಂಬಲ ದಿಂದ ತುಮಕೂರಿನ ಸಂಘಟನೆಯ ಹಿನ್ನಲೆಯನ್ನು ತೊರೆದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜ್‌ಗೆ ದಾಖಲಾಗಿ ವಿದ್ಯಾಭ್ಯಾಸವನ್ನು ಹೋರಾಟದೊಂದಿಗೆ ಮುಂದುವರಿಸಿದನು.

ಹೋರಾಟ

ನೆಲಮಂಗಲದಲ್ಲಿ ಕ್ರಾಂತಿ ಕಹಳೆಯನ್ನು ಮೊಳಗಿಸಿದ ದಲಿತ ನಾಯಕ ಎನ್.ಮೂರ್ತಿ ದಿನಾಂಕ: 2-4-1981 ರಂದು ನೆಲಮಂಗಲದ ಪ್ರವಾಸಿ ಮಂದಿರದಲ್ಲಿ ತಾಲ್ಲೋಕಿನ ಎಲ್ಲಾ ದಲಿತ ಹಿಂದುಳಿದ ಮುಖಂಡರ ಸಭೆಯನ್ನು ಕರೆದ ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಗ ಸಂಸ್ಥೆಯಾದ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ರಾಗಿ ಜವಾಬ್ದಾರಿ ಹೊತ್ತ ದಲಿತ ಯುವ ಮುಂದಾಳು ಎನ್.ಮೂರ್ತಿ ಕರೆದಿದ್ದ ಸಭೆಗೆ ನೆಲಮಂಗಲದ ರಾಯನನಗರ, ಪ್ರತಿಷ್ಠಿತ ವ್ಯಕ್ತಿ ನಿವೃತ್ತ ತಹಸೀಲ್ದಾ‌ರ್ ದಿ|| ಗವಿಯಪ್ಪ, ವಿಶ್ವೇಶ್ವರಪುರದ ದಲಿತ ಧುರೀಣ ದಿ।। ಗಂಗಬೈರಯ್ಯ ಮತ್ತು ದಿ|| ಚೌಡಪ್ಪ ದಲಿತ ಮುಖಂಡರಾದ ಇಂದಿರಾನಗರದ ಮಾರಪ್ಪ, ಮುಂತಾದ ಹಿರಿಯರು ಭಾಗವಹಿಸಿ ದ.ಸಂ.ಸ. ವನ್ನು ನೆಲಮಂಗಲ ತಾಲ್ಲೂಕು ಮಟ್ಟದಲ್ಲಿ ತೆರೆಯಲು ತೀರ್ಮಾನಿಸಿ ಅವಿರೋದವಾಗಿ, ಎನ್.ಮೂರ್ತಿಯನ್ನು ನೆಲಮಂಗಲ ತಾಲ್ಲೂಕು ದ.ಸಂ.ಸ. ಸಂಚಾಲಕನನ್ನಾಗಿ ಆಯ್ಕೆ ಮಾಡುವ ಮುಖೇನ ತಾಲ್ಲೋಕಿನ ದಲಿತ ಚಳವಳಿಗೆ ಮಹತ್ವದ ಕೊಡುಗೆ ನೀಡಿದರು.
ರಾಜಕೀಯ
ಮಾಜಿ ಮುಖ್ಯಮಂತ್ರಿ ಸಮಾಜವಾದಿ ದಿ।। ಡಿ ದೇವರಾಜ್ ಅರಸ್ ರವರು ಕಾಂಗ್ರೆಸ್ (ಐ) ತೊರೆದು ಕ್ರಾಂತಿರಂಗ ಪಕ್ಷವನ್ನು ಕರ್ನಾಟಕದಲ್ಲಿ ಹುಟ್ಟು ಹಾಕಿದ ಸಂದರ್ಭದಲ್ಲಿ ದೊಡ್ಡ ಬಳ್ಳಾಪುರದಲ್ಲಿ ಸಮಚಿಂತಕರ ಸಮಾವೇಶ ನೆರವೇರಿತು.
ಸಮಾವೇಶವನ್ನು ಉದ್ದೇಶಿಸಿ ಯುವ ತರುಣ ಎನ್. ಮೂರ್ತಿಗೆ ಭಾಷಣ ಮಾಡುವ ಅವಕಾಶ ದೊರೆಯಿತು. ಪಾರದರ್ಶಕ ಯುವಕ 20 ಅಂಶದ ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸುರವರ ಪ್ರಮುಖ ಪಾತ್ರ ಕುರಿತು ಭಾಷಣ ಮಾಡಿದ್ದನ್ನು ಗಮನಿಸಿ ಹರ್ಷಗೊಂಡ ಅರಸ್‌ರವರು ಚಪ್ಪಾಳೆ ಮಳೆಗರೆದರು ಯುವಕನನ್ನು ಜೊತೆಯಲ್ಲಿ ಕರೆತಂದಿದ್ದ ಮಾಜಿ ಮಂತ್ರಿ ಶ್ರೀ ಕೆ. ಪ್ರಭಾಕರ್ ರವರಿಂದ ಯುವಕನ ಪರಿಚಯವನ್ನು ಕೇಳಿ ತಿಳಿದು ಬೆನ್ನು ಕಟ್ಟಿದರು.
ಕ್ರಾಂತಿ ರಂಗವನ್ನು ಪುನರ್ಜೀವನಗೊಳಿಸಿದ್ದ ಸಮಾಜವಾದಿ ಮಾಜಿ ಮುಖ್ಯ ಮಂತ್ರಿ ಶ್ರೀ ಎಸ್. ಬಂಗಾರಪ್ಪನವರನ್ನು ದಿನಾಂಕ 29.01.1982ರಂದು ನೆಲಮಂಗಲಕ್ಕೆ ಕರೆತಂದು ಅಭಿನಂದಿಸಿ ‘ದಲಿತರ ಸಮಸ್ಯೆ ಮತ್ತು ದಲಿತರಿಗೆ ರಾಜಕೀಯ ನೆಲೆಗಟ್ಟು” ಕುರಿತು ಚರ್ಚಿಸಿದ ಎನ್.ಮೂರ್ತಿ, ಸಂಗಡಿಗರ ರಾಜಕೀಯ ಮತ್ತು ಸಂಘಟನಾತ್ಮಕ ಬದ್ಧತೆಯನ್ನು ಎಳೆಯ ವಯಸ್ಸಿನಲ್ಲಿನ ಧೀರ್ಘಾಲೋಚನೆಯ ವಿದ್ವತ್ತನ್ನು ಕಂಡ ಶ್ರೀ ಎಸ್.ಬಂಗಾರಪ್ಪ ಮತ್ತು ಇವರ ಜೊತೆಯಲ್ಲಿದ್ದ ದಿವಂಗತ ನಜೀರ್ ಸಾಬ್‌ ರವರಿಗೆ ಯುವಕನ ಸಾಮಾಜಿಕ ಕಾಳಜಿ ಕಂಡು ಆಶ್ಚರ್ಯಚಿತ್ತ ರನ್ನಾಗಿಸಿತು. ಈ ಸಂದರ್ಭದಲ್ಲಿ ಸ್ನೇಹಿತರಾದ ವಿಶ್ವೇಶ್ವರದ ಜಿ.ರಾಜಣ್ಣ, ವೈ. ವೆಂಕಟೇಶ್ (ಹೆಬ್ಬರು, ತುಮಕೂರು ತಾಲ್ಲೂಕು) ಮುಂಚೂಣಿ ಯಲ್ಲಿದ್ದರು.
ಪದವಿ
ತನ್ನ ವಿದ್ಯಾಭ್ಯಾಸದಲ್ಲಿ ಬಿ. ಎಸ್‌ಸಿ. ಪದವಿಯನ್ನು ಗಳಿಸಿದ ಪದವೀದರ ಎನ್.ಮೂರ್ತಿ ಕಾನೂನು ವಿದ್ಯಾಲಯದಲ್ಲಿ ದಾಖಲಾಗಿ ವ್ಯಾಸಂಗದ ಜೊತೆಯಲ್ಲಿ ಯೇ ಹೋರಾಟಗಳ ಪಕ್ವತೆಯನ್ನು ಪಡೆದು ನೊಂದ ದಲಿತರ ಧ್ವನಿಯಾದ ಮೂರ್ತಿಯ ಹೆಸರು ಬೆಳಗತೊಡಗಿತು.
ನೆಲಮಂಗಲ ತಾಲ್ಲೂಕಿನ ಪ್ರತಿ ಹಳ್ಳಿ-ಹಳ್ಳಿಗಳಿಗೆ ಹಗಲು ರಾತ್ರಿ ಗಳೆನ್ನದೆ ಭೇಟಿ ನೀಡಿ, ಇರುಳಿನಲ್ಲಿ ಹಳ್ಳಿಗಳಲ್ಲಿಯ ದಲಿತ ಕೇರಿಗಳಲ್ಲಿ ದಲಿತರೊಂದಿಗೆ ಬೆರೆತು-ಕಲೆತು ಅವರ ಸಂಕಷ್ಟಗಳಿಗೆ ನೋವಿನಧ್ವನಿಯಾಗಿ ಶೋಷಿತ ಸಮಾಜವನ್ನು ಸಂಘಟಿಸಿ, ನೂರಾರು ಹೋರಾಟಗಳನ್ನು ನಡೆಸಿ ಛಲಬಿಡದ ತ್ರಿವಿಕ್ರಮನಂತೆ ಹಿಡಿದಿದ್ದನ್ನು ಸಾಧಿಸುವ ಹಟವಾದಿ ಎನ್.ಮೂರ್ತಿಯ ಕಠಿಣವಾದ ಮಾತುಗಳು ಸಂಘರ್ಷ ಮಾಡುವವರಿಗೆ ಸ್ಫೂರ್ತಿ ಮತ್ತು ಸಲಹೆಯಾಗಿದ್ದರೆ, ಸಂಧಾನಗಾರರಿಗೆ, ಅಪಥ್ಯ ಮತ್ತು ಅಸಹಜವಾಗಿದ್ದವು. ಹೋರಾಟದ ಬಿರುಸಿನಲ್ಲಿ ವ್ಯವಸ್ಥೆ ಮೂರ್ತಿಯ ಮೇಲೆ ಎಷ್ಟೋ ಭಾರಿ ತನ್ನ ಕೆಂಗಣ್ಣು ತೆರೆದು ಬೆಂಕಿ ಮಳೆಗರೆಯಿತು. ಇದ್ಯಾವುದಕ್ಕೂ ಜಗ್ಗದ ಎಂಟೆದೆಯ ಬಂಟ ಉಕ್ಕಿನ ಮನುಷ್ಯ ಡಾ|| ಅಂಬೇಡ್ಕ‌ರ್ ವಿಚಾರ ಧಾರೆಯಿಂದ ಹೋರಾಟದ ಪಕ್ವತೆಯನ್ನು ಪಡೆದು ವ್ಯವಸ್ಥೆ ವಿರುದ್ಧ ಮಾಡುವ ಹೋರಾಟದಲ್ಲಿ ಎಷ್ಟೆ ಏಳು-ಬೀಳುಗಳು ಬಂದರೂ, ಧೈರ್ಯ ದಿಂದ ಮುನ್ನುಗ್ಗಿ ಸಾಗುತ್ತಿದ್ದ ಧೈರ್ಯಕ್ಕೆ ಜನ ಬೆಚ್ಚಿ ಬೆರಗಾಗುತ್ತಿದ್ದರು.

ದ.ಸಂ.ಸ. ರಾಜಕೀಯಕ್ಕೆ

ನೆಲಮಂಗಲದಲ್ಲಿ ಕ್ರಾಂತಿ ಕಹಳೆಯನ್ನು ಮೊಳಗಿಸಿದ ದಲಿತ ನಾಯಕ ಎನ್.ಮೂರ್ತಿ ದಿನಾಂಕ: 2-4-1981 ರಂದು ನೆಲಮಂಗಲದ ಪ್ರವಾಸಿ ಮಂದಿರದಲ್ಲಿ ತಾಲ್ಲೋಕಿನ ಎಲ್ಲಾ ದಲಿತ ಹಿಂದುಳಿದ ಮುಖಂಡರ ಸಭೆಯನ್ನು ಕರೆದ ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಗ ಸಂಸ್ಥೆಯಾದ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ರಾಗಿ ಜವಾಬ್ದಾರಿ ಹೊತ್ತ ದಲಿತ ಯುವ ಮುಂದಾಳು ಎನ್.ಮೂರ್ತಿ ಕರೆದಿದ್ದ ಸಭೆಗೆ ನೆಲಮಂಗಲದ ರಾಯನನಗರ, ಪ್ರತಿಷ್ಠಿತ ವ್ಯಕ್ತಿ ನಿವೃತ್ತ ತಹಸೀಲ್ದಾ‌ರ್ ದಿ|| ಗವಿಯಪ್ಪ, ವಿಶ್ವೇಶ್ವರಪುರದ ದಲಿತ ಧುರೀಣ ದಿ।। ಗಂಗಬೈರಯ್ಯ ಮತ್ತು ದಿ|| ಚೌಡಪ್ಪ ದಲಿತ ಮುಖಂಡರಾದ ಇಂದಿರಾನಗರದ ಮಾರಪ್ಪ, ಮುಂತಾದ ಹಿರಿಯರು ಭಾಗವಹಿಸಿ ದ.ಸಂ.ಸ. ವನ್ನು ನೆಲಮಂಗಲ ತಾಲ್ಲೂಕು ಮಟ್ಟದಲ್ಲಿ ತೆರೆಯಲು ತೀರ್ಮಾನಿಸಿ ಅವಿರೋದವಾಗಿ, ಎನ್.ಮೂರ್ತಿಯನ್ನು ನೆಲಮಂಗಲ ತಾಲ್ಲೂಕು ದ.ಸಂ.ಸ. ಸಂಚಾಲಕನನ್ನಾಗಿ ಆಯ್ಕೆ ಮಾಡುವ ಮುಖೇನ ತಾಲ್ಲೋಕಿನ ದಲಿತ ಚಳವಳಿಗೆ ಮಹತ್ವದ ಕೊಡುಗೆ ನೀಡಿದರು.
ರಾಜಕೀಯ
ಮಾಜಿ ಮುಖ್ಯಮಂತ್ರಿ ಸಮಾಜವಾದಿ ದಿ।। ಡಿ ದೇವರಾಜ್ ಅರಸ್ ರವರು ಕಾಂಗ್ರೆಸ್ (ಐ) ತೊರೆದು ಕ್ರಾಂತಿರಂಗ ಪಕ್ಷವನ್ನು ಕರ್ನಾಟಕದಲ್ಲಿ ಹುಟ್ಟು ಹಾಕಿದ ಸಂದರ್ಭದಲ್ಲಿ ದೊಡ್ಡ ಬಳ್ಳಾಪುರದಲ್ಲಿ ಸಮಚಿಂತಕರ ಸಮಾವೇಶ ನೆರವೇರಿತು.
ಸಮಾವೇಶವನ್ನು ಉದ್ದೇಶಿಸಿ ಯುವ ತರುಣ ಎನ್. ಮೂರ್ತಿಗೆ ಭಾಷಣ ಮಾಡುವ ಅವಕಾಶ ದೊರೆಯಿತು. ಪಾರದರ್ಶಕ ಯುವಕ 20 ಅಂಶದ ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸುರವರ ಪ್ರಮುಖ ಪಾತ್ರ ಕುರಿತು ಭಾಷಣ ಮಾಡಿದ್ದನ್ನು ಗಮನಿಸಿ ಹರ್ಷಗೊಂಡ ಅರಸ್‌ರವರು ಚಪ್ಪಾಳೆ ಮಳೆಗರೆದರು ಯುವಕನನ್ನು ಜೊತೆಯಲ್ಲಿ ಕರೆತಂದಿದ್ದ ಮಾಜಿ ಮಂತ್ರಿ ಶ್ರೀ ಕೆ. ಪ್ರಭಾಕರ್ ರವರಿಂದ ಯುವಕನ ಪರಿಚಯವನ್ನು ಕೇಳಿ ತಿಳಿದು ಬೆನ್ನು ಕಟ್ಟಿದರು.
ಕ್ರಾಂತಿ ರಂಗವನ್ನು ಪುನರ್ಜೀವನಗೊಳಿಸಿದ್ದ ಸಮಾಜವಾದಿ ಮಾಜಿ ಮುಖ್ಯ ಮಂತ್ರಿ ಶ್ರೀ ಎಸ್. ಬಂಗಾರಪ್ಪನವರನ್ನು ದಿನಾಂಕ 29.01.1982ರಂದು ನೆಲಮಂಗಲಕ್ಕೆ ಕರೆತಂದು ಅಭಿನಂದಿಸಿ ‘ದಲಿತರ ಸಮಸ್ಯೆ ಮತ್ತು ದಲಿತರಿಗೆ ರಾಜಕೀಯ ನೆಲೆಗಟ್ಟು” ಕುರಿತು ಚರ್ಚಿಸಿದ ಎನ್.ಮೂರ್ತಿ, ಸಂಗಡಿಗರ ರಾಜಕೀಯ ಮತ್ತು ಸಂಘಟನಾತ್ಮಕ ಬದ್ಧತೆಯನ್ನು ಎಳೆಯ ವಯಸ್ಸಿನಲ್ಲಿನ ಧೀರ್ಘಾಲೋಚನೆಯ ವಿದ್ವತ್ತನ್ನು ಕಂಡ ಶ್ರೀ ಎಸ್.ಬಂಗಾರಪ್ಪ ಮತ್ತು ಇವರ ಜೊತೆಯಲ್ಲಿದ್ದ ದಿವಂಗತ ನಜೀರ್ ಸಾಬ್‌ ರವರಿಗೆ ಯುವಕನ ಸಾಮಾಜಿಕ ಕಾಳಜಿ ಕಂಡು ಆಶ್ಚರ್ಯಚಿತ್ತ ರನ್ನಾಗಿಸಿತು. ಈ ಸಂದರ್ಭದಲ್ಲಿ ಸ್ನೇಹಿತರಾದ ವಿಶ್ವೇಶ್ವರದ ಜಿ.ರಾಜಣ್ಣ, ವೈ. ವೆಂಕಟೇಶ್ (ಹೆಬ್ಬರು, ತುಮಕೂರು ತಾಲ್ಲೂಕು) ಮುಂಚೂಣಿ ಯಲ್ಲಿದ್ದರು.
ಪದವಿ
ತನ್ನ ವಿದ್ಯಾಭ್ಯಾಸದಲ್ಲಿ ಬಿ. ಎಸ್‌ಸಿ. ಪದವಿಯನ್ನು ಗಳಿಸಿದ ಪದವೀದರ ಎನ್.ಮೂರ್ತಿ ಕಾನೂನು ವಿದ್ಯಾಲಯದಲ್ಲಿ ದಾಖಲಾಗಿ ವ್ಯಾಸಂಗದ ಜೊತೆಯಲ್ಲಿ ಯೇ ಹೋರಾಟಗಳ ಪಕ್ವತೆಯನ್ನು ಪಡೆದು ನೊಂದ ದಲಿತರ ಧ್ವನಿಯಾದ ಮೂರ್ತಿಯ ಹೆಸರು ಬೆಳಗತೊಡಗಿತು.
ನೆಲಮಂಗಲ ತಾಲ್ಲೂಕಿನ ಪ್ರತಿ ಹಳ್ಳಿ-ಹಳ್ಳಿಗಳಿಗೆ ಹಗಲು ರಾತ್ರಿ ಗಳೆನ್ನದೆ ಭೇಟಿ ನೀಡಿ, ಇರುಳಿನಲ್ಲಿ ಹಳ್ಳಿಗಳಲ್ಲಿಯ ದಲಿತ ಕೇರಿಗಳಲ್ಲಿ ದಲಿತರೊಂದಿಗೆ ಬೆರೆತು-ಕಲೆತು ಅವರ ಸಂಕಷ್ಟಗಳಿಗೆ ನೋವಿನಧ್ವನಿಯಾಗಿ ಶೋಷಿತ ಸಮಾಜವನ್ನು ಸಂಘಟಿಸಿ, ನೂರಾರು ಹೋರಾಟಗಳನ್ನು ನಡೆಸಿ ಛಲಬಿಡದ ತ್ರಿವಿಕ್ರಮನಂತೆ ಹಿಡಿದಿದ್ದನ್ನು ಸಾಧಿಸುವ ಹಟವಾದಿ ಎನ್.ಮೂರ್ತಿಯ ಕಠಿಣವಾದ ಮಾತುಗಳು ಸಂಘರ್ಷ ಮಾಡುವವರಿಗೆ ಸ್ಫೂರ್ತಿ ಮತ್ತು ಸಲಹೆಯಾಗಿದ್ದರೆ, ಸಂಧಾನಗಾರರಿಗೆ, ಅಪಥ್ಯ ಮತ್ತು ಅಸಹಜವಾಗಿದ್ದವು. ಹೋರಾಟದ ಬಿರುಸಿನಲ್ಲಿ ವ್ಯವಸ್ಥೆ ಮೂರ್ತಿಯ ಮೇಲೆ ಎಷ್ಟೋ ಭಾರಿ ತನ್ನ ಕೆಂಗಣ್ಣು ತೆರೆದು ಬೆಂಕಿ ಮಳೆಗರೆಯಿತು. ಇದ್ಯಾವುದಕ್ಕೂ ಜಗ್ಗದ ಎಂಟೆದೆಯ ಬಂಟ ಉಕ್ಕಿನ ಮನುಷ್ಯ ಡಾ|| ಅಂಬೇಡ್ಕ‌ರ್ ವಿಚಾರ ಧಾರೆಯಿಂದ ಹೋರಾಟದ ಪಕ್ವತೆಯನ್ನು ಪಡೆದು ವ್ಯವಸ್ಥೆ ವಿರುದ್ಧ ಮಾಡುವ ಹೋರಾಟದಲ್ಲಿ ಎಷ್ಟೆ ಏಳು-ಬೀಳುಗಳು ಬಂದರೂ, ಧೈರ್ಯ ದಿಂದ ಮುನ್ನುಗ್ಗಿ ಸಾಗುತ್ತಿದ್ದ ಧೈರ್ಯಕ್ಕೆ ಜನ ಬೆಚ್ಚಿ ಬೆರಗಾಗುತ್ತಿದ್ದರು.

ನಿಸರ್ಗ ಪ್ರಿಯ

ಸ್ವಾಭಾವಿಕವಾಗಿ ನಿಸರ್ಗ ಮತ್ತು ಪರಿಸರದಲ್ಲಿ ಇವರಿಗೆ ಅಪಾರ ಒಲವು. ತನ್ನ “ಪ್ರಜ್ವಲ್” ನಿಲಯ ಒಳಾಂಗಣದಲ್ಲಿ ಪ್ರಕೃತಿಧಾಮವೆಂಬ ಕೈದೋಟದಲ್ಲಿ ಸಸ್ಯ ಸಂಜೀವಿನಿಗಳನ್ನು ಬೆಳೆಸಿರುವ ಇವರು ನಿಜಕ್ಕೂ ನಿಸರ್ಗ ಪ್ರಿಯರೇ ಸರಿ. ತನ್ನ ಪ್ರೀತಿಯ ಸಾಕು ನಾಯಿ ಹೆಸರು ಟೋಬಿ (ಡಾ|| ಅಂಬೇಡ್ಕರ್ ಬದುಕಿನ ದಿನಗಳಲ್ಲಿ ಈ ಹೆಸರನ್ನು ತನ್ನ ಪ್ರೀತಿಯ ನಾಯಿಗೆ ಇಟ್ಟಿದ್ದರು), ಬೆಕ್ಕು, ನಾಯಿ, ಪ್ರಾಣಿ, ಪಕ್ಷಿಗಳೆಂದರೆ ಪಂಚಪ್ರಾಣವಾದ ಮಾನವೀಯ ವ್ಯಕ್ತಿತ್ವದ ಎನ್.ಮೂರ್ತಿ ರವರ ಜೀವನ ವಿಚಾರ ಶಿಸ್ತು ಬದ್ಧವಾದ ನೀತಿ-ನಿಯಮವನ್ನು ಅವಲಂಬಿಸಿಕೊಂಡಿದೆ.
ಶ್ರೀ ಎನ್.ಮೂರ್ತಿರವರು ತನ್ನ ಬಂಧು-ಬಳಗದವರ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಮೂರುತಿ ತಮ್ಮ ಮನೆಗೆ ಕಷ್ಟ-ಕಾರ್ಪಣ್ಯ, ದುಃಖ-ದುಮ್ಮಾನಗಳನ್ನು ಹೊತ್ತು ಬಂದ ಜನಸಾಮಾನ್ಯರ ಹಸಿದ ಹೊಟ್ಟೆಗೆ ಅನ್ನ ನೀಡಿ ಅನಂತರ ಕಷ್ಟ ನಿವಾರಣೆಗೆ ಕಂಕಣಬದ್ದರಾಗಿ ನಿಲ್ಲುವ ಇಂತಹ ಮೇರು ವ್ಯಕ್ತಿಗಳು ಸಮಾಜದಲ್ಲಿ ವಿರಳ.
ಅಭ್ಯಾಸ ಮತ್ತು ಹವ್ಯಾಸ
ಸೂರ್ಯ ಉದಯವಾಗಿ ತನ್ನ ನಿತ್ಯದ ಕಾಂತಿಯಿಂದ, ಈ ಜಗತ್ತನ್ನು ಬೆಳಗುತ್ತಿರುವ ಭಾಸ್ಕರ ತನ್ನ ಕರ್ತವ್ಯವನ್ನು ಹೇಗೆ ಮರೆಯುವುದಿಲ್ಲವೋ ಅಂತೆಯೇ, ಈ ಮೂರ್ತಿಯವರು ಸಹ, ಬೆಳಗಾಗುತ್ತಲೇ ಎದ್ದು ತನ್ನ ದಿನ ನಿತ್ಯದ ಹವ್ಯಾಸವಾದ ವ್ಯಾಯಾಮವನ್ನು ಮಾಡಿ ಮುಗಿಸುವುದರೊಳಗೆ ತನ್ನ ಮನೆಯ ಮಹಡಿಯ ಮೇಲೆ ಬಂದು, ತಮಗಾಗಿ ಕಾಯುತ್ತಿರುವ ಜನತೆಯ ಸಂದರ್ಶನ, ತಮ್ಮ ಕಷ್ಟ-ದುಃಖಗಳನ್ನು ತೋಡಿಕೊಳ್ಳುವವರಿಗೆ ಸಾಂತ್ವಾನ ಹೇಳಿ, ವಿಚಾರ ವಿನಿಮಯ ಮಾಡಿ, ಯಾವ ಕೆಲಸವೇ ಆಗಲಿ ಪ್ರಯತ್ನಿಸುತ್ತೇನೆ ಎಂಬ ಉತ್ತರ ನೀಡಿ, ಬಂದವರಿಗೆ ತಮ್ಮ ಕೈಲಾದ ಸೇವೆ ಮಾಡುವುದೇ ತನ್ನ ಕರ್ತವ್ಯವೆಂದು ಭಾವಿಸಿರುವ ಮೂರ್ತಿಯವರನ್ನು ಅವಲಂಬಿಸಿ ಬರುವ ಮಂದಿಯಾದರೂ ಯಾರು? ಅವರೇ ದಲಿತರು, ಶೋಷಿತರು, ಅನ್ಯಾಯಕ್ಕೊಳಗಾದವರು, ಭೂಮಾಲೀಕರಿಂದ ವಂಚಿತರಾದವರು, ದೌರ್ಜನ್ಯಕ್ಕೆ ಸಿಲುಕಿ ನರಳುತ್ತಿರುವವರು, ಪೋಲೀಸರ ಭ್ರಷ್ಟತೆಗೆ ಬಲಿಯಾದವರು, ಸರ್ಕಾರಿ ಅಧಿಕಾರಿಗಳ ಲಂಚಕ್ಕೆ ಬಲಿಬಿದ್ದವರು. ಇಂತಹವರ ಕಷ್ಟ-ಕಾರ್ಪಣ್ಯಗಳನ್ನು ಪರಿಹರಿಸಿ ಕೊಡುವ ಭರವಸೆ ನೀಡಿದ ಮೂರ್ತಿಯವರು, ಅನೇಕ ಮಂದಿಗೆ, ನುಡಿದಂತೆ ನಡೆದ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ದಲಿತ ರತ್ನ ಎಂಬ ಕೀರ್ತಿ ಪಡೆದಿದ್ದಾರೆ.
ತನ್ನ ಕರ್ತವ್ಯ ಪಾಲನೆಗಾಗಿ ಬೆಂಗಳೂರಿನಲ್ಲಿ ಕಾಯುತ್ತಿರುವ ಮಂದಿಗಳನ್ನು ಭೇಟಿ ಮಾಡುವ ಸಲುವಾಗಿ ತನ್ನ ಮಾರುತಿ ವ್ಯಾನನ್ನು ಏರಿ ಕಾಯುತ್ತಿರುವ ಕಾರ್ಯಕರ್ತ ಮುಖಂಡರೊಡನೆ ರಸ್ತೆಯಲ್ಲಿ ಹೊರಟರೆ, ದಾರಿಯುದ್ದಕ್ಕೂ ನಮಸ್ಕರಿಸುವ ಕೈಗಳಿಗೇನು ಕಡಿಮೆ ಇಲ್ಲ. ಛಲ ಬಿಡದ ತ್ರಿವಿಕ್ರಮನಂತೆ, ಮಂತ್ರಿ ಮಾನ್ಯ ಅಧಿಕಾರಿಗಳನ್ನು ಕಾಡಿ ಪೀಡಿಸಿ, ಬಡಪಾಯಿಗಳ ಕೆಲಸವನ್ನು ಪೂರ್ಣಗೊಳಿಸದೆ, ಆ ಜಾಗ ಬಿಟ್ಟು ಕದಲುವ ಜಾಯಮಾನ ಮೂರ್ತಿಯವರದಲ್ಲವೆಂಬ ಸತ್ಯವನ್ನರಿತ ಎಷ್ಟೋ ಮಂದಿ ಮಂತ್ರಿ ಮಾನ್ಯರು, ಮೂರ್ತಿಯವರನ್ನು ಕೆಣಕಿರುವುದು ಉಂಟು.
ಹೋಟೆಲ್ ತಿಂಡಿಗಳಿಂದ ವರ್ಜಿತವಾಗಿ, ಹಲವು ದುಶ್ಚಟಗಳಾದ ಮದ್ಯಪಾನ, ಧೂಮಪಾನಗಳ್ಯಾವುದನ್ನು ಹವ್ಯಾಸವಾಗಿ ಮಾಡಿಕೊಂಡಿಲ್ಲದ ಮೂರ್ತಿಯವರ ವ್ಯಕ್ತಿತ್ವವೇ ಒಂದು ಉತ್ತಮ ಸಚ್ಛಾರಿತ್ರತೆಯ ಸಾಕಾರ ಮೂರ್ತಿಯಂತಿದೆ. ಈ ವಿಚಾರವಾಗಿ ಮೂರ್ತಿಯವರನ್ನು ಹತ್ತಿರದಿಂದ ಬಲ್ಲವರಿಗೆ ತುಂಬಾ ಚೆನ್ನಾಗಿ ಅರಿವಿದೆ. ಎಂದು ಯಾರೇ ಆಗಲಿ, ಮೂರ್ತಿಯವರನ್ನು ಏಕವಚನದಿಂದ ಕರೆದ, ಕಾರ್ಯಕರ್ತ ಮುಖಂಡರಿಲ್ಲ, ಹಿರಿಯರಾಗಲಿ, ಕಿರಿಯರಾಗಲಿ, ಎಲ್ಲರೂ ಸಹ ಮೂರ್ತಿ ಸಾಹೇಬರೇ ಎಂದು ಸಂಬೋಧಿಸುವ ಮಂದಿಯೇ ಹೆಚ್ಚು. ಇವರಿಂದ ಸಹಾಯ ಪಡೆದವರಾಗಲಿ, ಕಾರ್ಯಕರ್ತ ಮುಖಂಡರಾಗಲಿ ಎಂದೂ ಯಾವ ಘಳಿಗೆಯಲ್ಲೂ ದ್ವೇಷ, ಅಸೂಯೆಪಟ್ಟು ಮೂರ್ತಿಯರವರ ವಿರುದ್ಧ ತಿರುಗಿ ಬಿದ್ದವರು ಯಾರೂ ಇಲ್ಲವೆಂದೇ ಹೇಳಬೇಕು. ಒಂದು ವೇಳೆ ಬಿದ್ದಿದ್ದರೂ ಮೂರ್ತಿಯವರ ಏಳಿಗೆಯನ್ನು, ಶ್ರೇಯಸ್ಸನ್ನು ಸಹಿಸದ ಕಿಡಿಗೇಡಿಗಳು ಅಸೂಯಾ ಮನೋಭಾವದಿಂದ ದೂರದಲ್ಲಿ ನಿಂತು ತನ್ನ ಒಡಲನ್ನು ಬಡಿದುಕೊಂಡಿರಬಹುದು. ಇವರ ಸ್ನೇಹವನ್ನು ಉಪಯೋಗಿಸಿಕೊಳ್ಳದವರೇ ದೌರ್ಭಾಗ್ಯರು.
ಎಲ್ಲಾ ಕಾರ್ಯಗಳನ್ನು ಮುಗಿಸಿ, ಮನೆಗೆ ಬರುವುದರೊಳಗೆ ರಾತ್ರಿ 11.00 ಅಥವ 12.00 ಗಂಟೆಯಾಗಿರುತ್ತದೆ. ಆ ವೇಳೆಯಲ್ಲಿ ತನ್ನ ಸಂಸಾರದೊಂದಿಗೆ ಕಲೆತು, ಊಟ ಮಾಡಿ, ಎಷ್ಟೇ ಆಯಾಸವಾಗಿದ್ದರೂ ಸಹ ಕೆಲವು ವಿಚಾರಧಾರೆಗಳ ಗ್ರಂಥಗಳ ಕಡೆ ಕಣ್ಣು ಹಾಯಿಸಿ, *ಅನೇಕ ವಿಚಾರಗಳನ್ನು ಗ್ರಹಿಸಿಯೇ ಮಲಗುವುದು.